ADVERTISEMENT

ಯಾದಗಿರಿ: ಮುಂದೂಡಿದ ಜಿ.ಪಂ ಸಭೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 9:47 IST
Last Updated 8 ಜೂನ್ 2013, 9:47 IST

ಯಾದಗಿರಿ: ಸದಸ್ಯರ ನಡುವೆ ಹೊಂದಣಿಕೆ ಇಲ್ಲದೆ, ಸದಸ್ಯರ ನಡುವೆ ಸಮನ್ವಯದ ಕೊರತೆಯಿಂದಾಗಿ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಗೆ ಸದಸ್ಯರು ಹಾಜರಾದರೂ ಸಭೆ ಜರು ಗದ ಘಟನೆ ಶುಕ್ರವಾರ ಜರುಗಿತು.

ಏಳು ತಿಂಗಳ ನಂತರ ಶುಕ್ರವಾರ ಕರೆದ 8ನೇ ಸಾಮಾನ್ಯ ಸಭೆ ಎಂದಿನಂತೆ ನಿಗದಿತ 11 ಗಂಟೆಗೆ  ಪ್ರಾರಂಭ ವಾ ಯಿತು. ಜಿಲ್ಲಾ ಪಂಚಾಯತಿಯ 21 ಸದಸ್ಯರು ಹಾಜರಿ ಪುಸ್ತಕಕ್ಕೆ ಸಹಿ ಹಾಕಿದರು. ಇನ್ನೇನು ಸಭೆ ಪ್ರಾರಂಭ ವಾಗುತ್ತದೆ ಎನ್ನುವಷ್ಟರಲ್ಲಿ 11 ಜನ ಸದಸ್ಯರು ನೆಪವೊಡ್ಡಿ ಸಭೆಯಿಂದ ಹೊರಗೆ ಹೋದರು. ಹೋಗುವ ಮು ನ್ನ ಇದು ಬಹಿಷ್ಕಾರವಲ್ಲ. ಸ್ವಲ್ಪ ಚ ರ್ಚಿಸಿ ಹಿಂತಿರುಗುತ್ತೇವೆ ಎಂದರು. ಆದರೆ ಅರ್ಧ ಗಂಟೆ ಕಾದರೂ ಯಾ ವೊಬ್ಬ ಸದಸ್ಯರು ಸಭೆಗೆ ವಾಪಸಾ ಗಲಿಲ್ಲ.

ಎಲ್ಲಾ ಸದಸ್ಯರು ಸಹಿ ಮಾಡಿ ್ದದರಿಂದ ಕೋರಂ ಕೊರತೆ ಎಂದು ಹೇಳ ಲು ಬರುವುದಿಲ್ಲ. ಅದಕ್ಕಾಗಿ ಇನ್ನೂ ಅರ್ಧಗಂಟೆ ಸಮಯ ನೀಡುತ್ತೇವೆ. ಆ ಸಮಯದೊಳಗೆ ಬಂದರೆ ಸಭೆ ಪ್ರಾ ರಂಭಿಸುತ್ತೇವೆ. ಇಲ್ಲವಾದಲ್ಲಿ ರದ್ದು ಪಡೆಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಸಿಇಓ ಎಸ್.ಎ.ಜಿಲಾನಿ ಹೇಳಿದರು.

ಸದಸ್ಯರ ಆಗಮನಕ್ಕಾಗಿ ಸುಮಾರು 1 ಗಂಟೆ ಅಧಿಕಾರಿಗಳು ಮತ್ತು ಮಹಿ ಳಾ ಅಧ್ಯಕ್ಷರು ಸೇರಿ 12 ಜನ ಮಹಿಳಾ ಸದಸ್ಯರು ಕಾದು ಕಾದು ಸುಸ್ತಾದರು. ಒಂದು ಗಂಟೆಯ ನಂತರ ಪುರುಷ ಸದಸ್ಯರು ಸಭೆಗೆ ಪ್ರವೇಶಿಸುತ್ತಿದ್ದಂತೆ 11 ಜನ ಮಹಿಳಾ ಸದಸ್ಯರು ಸಭೆಯಿಂದ ಹೊರನಡೆದು ಪುರುಷ ಸದಸ್ಯರಿಗೆ ತಿರಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.