ADVERTISEMENT

ಸಂಭ್ರಮದ ಹನುಮಾನ್ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 10:35 IST
Last Updated 19 ಏಪ್ರಿಲ್ 2011, 10:35 IST

ಯಾದಗಿರಿ: ರಾಮಭಕ್ತ ಹನುಮನ ಜಯಂತಿಯನ್ನು ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾ ಯಿತು. ಬೆಳಿಗ್ಗೆಯಿಂದಲೇ ನಗರದ ವಿವಿಧೆಡೆ ಹನುಮಾನ ದೇವಸ್ಥಾನಗಳಿಗೆ ಭೇಟಿ ನೀಡಿದ ಭಕ್ತಾದಿಗಳು, ಪೂಜೆ ಸಲ್ಲಿಸಿದರು. ಇಲ್ಲಿಯ ಬೆಟ್ಟದ ಆಂಜನೇಯ ದೇವಸ್ಥಾನದಲ್ಲಿ ಹನುಮಾನ ಜಯಂತಿ ಯನ್ನು ಅದ್ದೂರಿಯಾಗಿ ಆಚರಿಸಲಾ ಯಿತು. ಬೆಳಿಗ್ಗೆ ಮೈಲಾಪುರ ಅಗಸಿ ಯಿಂದ ಆರಂಭಗೊಂಡ ಮೆರವಣಿಗೆ ಮುಖ್ಯರಸ್ತೆಯಿಂದ ಚಕ್ರಕಟ್ಟಾ, ಗಾಂಧಿ ವೃತ್ತದ ಮೂಲಕ ಬೆಟ್ಟದ ಮೇಲಿನ ಆಂಜನೇಯ ದೇವಸ್ಥಾನ ತಲುಪಿತು. ನಂತದ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ, ಪೂಜೆ, ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆದವು.

ಜೈಭವಾನಿ ಸೇವಾ ಸಮಿತಿ ವತಿ ಯಿಂದ ಇಲ್ಲಿಯ ಸ್ಟೇಶನ್ ರಸ್ತೆಯ ಹನುಮಾನ ಮಂದಿರದಲ್ಲಿ ಹನುಮಾನ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆ ಭೀಮಾ ನದಿಗೆ ತೆರಳಿ ಗಂಗಾಸ್ನಾನ, ಧ್ವಜ ಪೂಜೆ, ಮಹಾಭಿಷೇಕ, ಪ್ರಸಾದ ವಿತ ರಣೆ, ಸಂಜೆ ವಿಶೇಷ ಭಜನೆ ಮುಂತಾದ ಕಾರ್ಯಕ್ರಮಗಳು ನಡೆದವು. ತಾಲ್ಲೂಕಿನ ವಿಶ್ವಾಸಪೂರ ಠಾಣಗುಂದಿ ಸ್ಟೇಶನ್‌ನಲ್ಲಿ ವೀರಾಂಜ ನೇಯ ಜಾತ್ರಾ ಮಹೋತ್ಸವ ಜರು ಗಿತು. ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದ ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಸಂಜೆ 6 ಗಂಟೆಗೆ ರಥೋತ್ಸವ ಜರುಗಿತು.

ಶಹಾಪುರ ತಾಲ್ಲೂಕಿನ ವಡಗೇರಾದಲ್ಲಿ ನೇತಾಜಿ ಯುವ ಸೇನೆ ವತಿಯಿಂದ ಹನುಮಾರ ದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಗ್ರಾಮದ ಬಸವೇಶ್ವರ ವೃತ್ತದಿಂದ ಹನುಮಾನ ಮಂದಿರದವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಹಿರಿಯ ನಾಗಣ್ಣ ಬೊಜ್ಜಿ, ಶ್ರೇಷ್ಠವಾದ ಸಂಜೀವಿನಿ ಮೂರ್ತಿ ರಾಜ್ಯದಲ್ಲಿ ಎರಡೇ ಕಡೆಗಳಲ್ಲಿವೆ. ಹಂಪಿಯಲ್ಲಿ ಒಂದು ಮೂರ್ತಿ ಇದ್ದರೆ, ವಡಗೇರಾದಲ್ಲಿ ಇನ್ನೊಂದು ಮೂರ್ತಿ ಇದೆ ಎಂದು ತಿಳಿಸಿದರು. ಸಿದ್ಧಣ್ಣಗೌಡ ಕಾಡಂನೋರ್ ಮಾತನಾಡಿ, ಯುವಕರು ದುಷ್ಟ ಚಟ ಗಳಿಗೆ ಬಲಿಯಾಗದೇ, ಹನುಮಾನ ನಂತೆ ಶಕ್ತಿವಂತರಾಗಿ ಬೆಳೆಯಬೇಕು ಎಂದು ಹೇಳಿದರು.

ದೇವವಸ್ಥಾನದಲ್ಲಿ ಅಭಿಷೇಕ, ಎಲೆ ಪೂಜೆ, ಅರ್ಚನೆ ಸೇರಿದಂತೆ ಹಲ ವಾರು ಕಾರ್ಯಕ್ರಮ ನಡೆದವು. ಶಂಕ್ರಯಯ್ಯ ಸ್ವಾಮಿ, ಬಸವರಾಜಪ್ಪ ಗೌಡ, ಡಾ. ಸುಭಾಷ ಕರಣಿಗಿ, ಅನಂತರಾವ ಕುಲಕರ್ಣಿ, ರಾಚಯ್ಯ ಸ್ವಾಮಿ, ಬಸವರಾಜ ಸೊನ್ನದ, ಗೌರಿಶಂಕರ ಸ್ವಾಮಿ, ಯಂಕಪ್ಪ ಬಸಂಪೂರ, ಶಿವರುದ್ರಯ್ಯ ಸ್ವಾಮಿ, ಅಶೋಕ ಮುಸ್ತಾಜೀರ್, ದೇವಪ್ಪ ಕಡೇಚೂರ, ಸೂಗರೆಡ್ಡಿ ಗೌಡ, ಹಣಮಂತ್ರಾಯ ಜಡಿ, ಬಸವ ರಾಜ ನೀಲಹಳ್ಳಿ, ಶರಣಿ ಇಟಗಿ, ಸಾಬಣ್ಣ ಸಿದ್ಧಿ, ವಿರುಪಾಕ್ಷಪ್ಪ ಗೌಡ, ನೇತಾಜಿ ಯುವ ಸೇನೆಯ ಪದಾ ಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.