ADVERTISEMENT

`ಹಿಂದುಳಿದ ಕುಂಬಾರರಿಗೆ ನ್ಯಾಯ ಒದಗಿಸಿ'

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 8:27 IST
Last Updated 16 ಜುಲೈ 2013, 8:27 IST

ಯಾದಗಿರಿ: ಜಿಲ್ಲೆಯಲ್ಲಿ ಅತಿ ಹಿಂದುಳಿದ ಕುಂಬಾರರಿಗೆ ಜಾತಿ ಪ್ರಾಮಾಣ ಪತ್ರ ಕೊಡುವ ಪೂರ್ವದಲ್ಲಿ ಪಂಚನಾಮ ಮಾಡಿಸುವಂತೆ ಆಗ್ರಹಿಸಿ ಕುಂಬಾರ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಅತಿ ಹಿಂದುಳಿದ ಕುಂಬಾರರು (ಮಾಂಸಹಾರಿ) ಪ್ರವರ್ಗ 2ಎ ದಲ್ಲಿ ಬರುತ್ತಾರೆ. ಆದರೆ ವೀರಶೈವ ಲಿಂಗಾಯತ       ಕುಂಬಾರರು    3ಬಿಯಲ್ಲಿ ಬರುತ್ತಾರೆ.

ಆದರೆ ಲಿಂಗಾಯತ ಕುಂಬಾರರು 2 ಎ ಎಂದು ಜಾತಿ ಪ್ರಮಾಣಪತ್ರವನ್ನು ತೆಗೆಸಿಕೊಂಡು ನಿಜವಾದ ಕುಂಬಾರರನ್ನು ಸರ್ಕಾರಿ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಎಲ್ಲ ತಹಸೀಲ್ದಾರರು ಹಾಗೂ ಗ್ರಾಮ ಲೆಕ್ಕಪಾಲಕರು ಹಾಗೂ ಕಂದಾಯ ನಿರೀಕ್ಷಕರಿಂದ ನಿಜವಾಗಿ ಪಂಚನಾಮ ಮಾಡಿಸಿ ಜಾತಿ ಪ್ರಮಾಣ ಕೊಡಲು ಆದೇಶಿಸಬೇಕು ಎಂದು ಮನವಿ ಮಾಡಿದರು.

ವೀರಶೈವ ಲಿಂಗಾಯತ ಕುಂಬಾರರು ಹಾಗೂ ಆಂಧ್ರಪ್ರದೇಶದಿಂದ ಬಂದಿರುವ ತೆಲುಗು ಕುಂಬಾರರನ್ನು ಗುರುತಿಸಲು ಗ್ರಾಮದಲ್ಲಿ ಪಂಚನಾಮ ಮಾಡಿಸಿ. ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.

ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ ಬರುವ ಸರ್ಕಾರಿ ಸಾಲ ಸೌಲಭ್ಯಗಳು ಕೈತಪ್ಪಿ ಹೋಗುವ ಸಾಧ್ಯತೆ ಹೆಚ್ಚಾಗಿದ್ದು, ಹಿಂದುಳಿದ ಕುಂಬಾರರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಶೇಖರಪ್ಪ ಅರ್ಜುಣಿಗಿ, ಸಾಬಣ್ಣ ಎಂ.ಹೊಸಳ್ಳಿ, ರಾಜೇಂದ್ರಕುಮಾರ ಮುದ್ನಾಳ, ಗುರಬಸ್ಸಪ್ಪ ಹಾಲಗೇರಾ, ಈರಣ್ಣ ವಡಗೇರಾ, ಗಾಲೆಪ್ಪ ಬೆಳಗೇರಾ, ದೊಡ್ಡಸಾಬಣ್ಣ ಹೊಸಳ್ಳಿ, ಮಲ್ಲಿಕಾರ್ಜುನ, ಶರಣಪ್ಪ, ಮಾರೆಪ್ಪ, ವೆಂಕಟೇಶ, ದೇವಿಂದ್ರಪ್ಪ ಬೆಳಗೇರಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.