ADVERTISEMENT

ಹುಣಸಗಿ ಪ್ರಥಮ, ಹೆಗ್ಗಣದೊಡ್ಡಿ ಶಾಲೆ ದ್ವಿತೀಯ

ವಜ್ಜಲ: ಪ್ರೌಢ ಶಾಲೆ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 4:00 IST
Last Updated 5 ಮಾರ್ಚ್ 2018, 4:00 IST

ಹುಣಸಗಿ: ಸಮೀಪದ ವಜ್ಜಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹುಣಸಗಿಯ ಬಿ.ಎಸ್.ಪಾಟೀಲ ಸ್ಮಾರಕ ಪ್ರೌಢ ಶಾಲೆ ಪ್ರಥಮ ಬಹುಮಾನ ಪಡೆಯುವಲ್ಲಿ ಯಶಸ್ವಿಯಾದರೆ ಹೆಗ್ಗಣದೊಡ್ಡಿ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. ಕನ್ನಳ್ಳಿಯ ಸರ್ಕಾರ ಪ್ರೌಢ ಶಾಲೆ ತೃತೀಯ ಸ್ಥಾನ ಗಳಿಸಿತು.

ವಜ್ಜಲ ಗ್ರಾಮದ ಪವಾಡಪುರುಷ ತಿಮ್ಮಪ್ಪಯ್ಯ ಶರಣರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಮಾತೋಶ್ರೀ ಸುಶೀಲಾಬಾಯಿ ಪಟ್ಟಣಶೆಟ್ಟಿ ಸ್ಮಾರಕ ಪ್ರತಿಷ್ಠಾನದಿಂದ ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.

ಮೊದಲ ಎರಡೂ ತಂಡಗಳು ಸಮನಾಂತರವಾಗಿ ಉತ್ತರಿಸಿ ಟೈ ಆಗಿದ್ದರಿಂದ ಮತ್ತೆ ಪ್ರಶ್ನೆಗಳನ್ನು ಕೇಳಿದಾಗ ನಿಖರ ಉತ್ತರ ನೀಡುವ ಮೂಲಕ ಬಿ.ಎಸ್‌.ಪಾಟೀಲ ಶಾಲೆ ವಿದ್ಯಾರ್ಥಿಗಳು ಜಯ ತಮ್ಮದಾಗಿಸಿಕೊಂಡರು.

ADVERTISEMENT

ಕಾರ್ಯಕ್ರಮವನ್ನು ಉದ್ಘಾಟಿಸಿದ ರಡ್ಡಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ‘ಮಕ್ಕಳಲ್ಲಿನ ಸ್ಪರ್ಧಾತ್ಮಕ ಭಾವನೆಯನ್ನು ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಒರೆಗೆ ಹಚ್ಚಲು ಈ ಕಾರ್ಯಕ್ರಮ ಸಹಕಾರಿಯಾಗಿದೆ’ ಎಂದರು.

‘ಮಕ್ಕಳಲ್ಲಿ ಕಲಿಕೆ ಆಸಕ್ತಿ ಮೂಡಿಸಲು ಉದ್ಯಮಿ ಡಾ.ಎಸ್‌.ಪಿ.ದಯಾನಂದ ಅವರ ಕಾರ್ಯ ಶ್ಲಾಘನೀಯ’ ಎಂದರು.

ಜಿಲ್ಲಾ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ ಮಾತನಾಡಿ, ‘ರಸಪ್ರಶ್ನೆ ಸ್ಪರ್ಧೆಯಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಶೈಕ್ಷಣಿಕ ಆಸಕ್ತಿ ಹೆಚ್ಚಾಗುವುದರೊಂದಿಗೆ ಎಂತಹ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದಾಗಿದೆ’ ಎಂದರು.

ಭೀಮಶೇನರಾವ ಕುಲಕರ್ಣಿ ಮಾತನಾಡಿ, ‘30 ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ 5 ತಂಡಗಳು ಫೈನಲ್‌ಗೆ ಆಯ್ಕೆಯಾದವು. ಪ್ರಥಮ ತಂಡಕ್ಕೆ ₹20 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹10 ಸಾವಿರ ಹಾಗೂ ಪ್ರಶಸ್ತಿ ಫಲಕ ಬಹುಮಾನ ಇದೆ. ಈ ಪ್ರಶಸ್ತಿಗಳನ್ನು ಪವಾಡ ಪುರುಷ ತಿಮ್ಮಪ್ಪಯ್ಯ ಶರಣರ ಜಾತ್ರಾ ಮಹೋತ್ಸವದಂದು ನೀಡಲಾಗುವುದು’ ಎಂದು ವಿವರಿಸಿದರು.

ಎಣ್ಣೆ ಬೀಜ ಬೆಳೆಗಾರರ ಸಂಘದ ಅಧ್ಯಕ್ಷ ಚಂದ್ರಶೇಖರ ಬೋರಂಗುಂಡ, ಅಮರೇಶ ಬಸನಗೌಡ್ರ, ಬಸನಗೌಡ ಬಾಗೇವಾಡಿ, ಸಂತೋಷ ಹುಂಡೆಕಾರ, ಶಿವಲಿಂಗಪ್ಪ ಭಜನಿ, ಆನಂದ, ಆರ್.ಎಲ್.ಸುಣಗಾರ, ಸಂತೋಷ ಪಾಟೀಲ, ಬಸಣ್ಣ ಯಾಳಗಿ, ಶ್ರೀಶೈಲ ದೇವತಕಲ್ಲ, ಶಾಲೆಯ ಮುಖ್ಯಶಿಕ್ಷಕ ಎಸ.ಎಸ್.ಬಾಕಲಿ, ಮಲ್ಲಿಕಾರ್ಜುನ ದೊಡಮನಿ ಇದ್ದರು.

ಸಂದೇಶ ಜೋಶಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಗುತ್ತೇದಾರ ನಿರೂಪಿಸಿದರು. ನಾಗನಗೌಡ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.