ADVERTISEMENT

ಹೆರೂರ ನಿಧನಕ್ಕೆ ಸಂತಾಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 8:45 IST
Last Updated 4 ಡಿಸೆಂಬರ್ 2013, 8:45 IST

ಯಾದಗಿರಿ: ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ, ಹಿರಿಯ ರಾಜಕೀಯ ಧುರೀಣ ವಿಠ್ಠಲ ಹೆರೂರ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ಸಮುದಾಯಕ್ಕೆ ಸೇರಿದ ಅವರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯಗಳ ಆಶಾಕಿರಣವಾಗಿದ್ದರು. ಈ ಸಮು­ದಾಯಗಳ ಏಳಿಗೆಗೆ ಅವರು ನಡಿಸಿದ ಹೋರಾಟ ಸ್ಮರಣೀಯ. ಅವರ ನಿಧನದಿಂದ ಸಮುದಾಯಕ್ಕೆ  ತುಂಬ­ಲಾರದ ನಷ್ಟ ಉಂಟಾಗಿದೆ. ಈ ಸಮುದಾಯ ಮತ್ತು ಕುಟುಂಬ ವರ್ಗಕ್ಕೆ ವಿಠ್ಠಲ ಹೆರೂರ ಅವರ ನಿಧನದಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಟ್ಟೆಣ್ಣವರ: ವಿಧಾನ ಪರಿಷತ್ ಮಾಜಿ ಸದಸ್ಯರು, ರಾಜ್ಯದ ಹಿಂದುಳಿದ ವರ್ಗದ ನೇತಾರ ಹೆರೂರ ಅವರ ನಿಧನ ಮರಣ ಭರಿಸಲಾಗದ ನಷ್ಟ ಎಂದು ಗುಲ್ಬರ್ಗ ಕಾಡಾ ಮಾಜಿ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದಾದ್ಯಂತ ಕೋಲಿ ಸಮಾಜದ ಸಂಘಟಿಸುವಲ್ಲಿ ಹೆರೂರ ಅವರ ಪರಿಶ್ರಮ ಅಪಾರ. ಹೋರಾಟ­ದಲ್ಲಿ  ಸಂಘರ್ಷದ ಹಾದಿ ತುಳಿದರೂ ಸಮಾಜದ ಕಾಳಜಿ ಎಂದಿಗೂ ಬಿಟ್ಟು ಕೊಡಲಿಲ್ಲ. ವಿಠಲ್ ಹೆರೂರ ಅವರ ನಿಧನದಿಂದ ರಾಜ್ಯ ಒಬ್ಬ ನೇರ ನುಡಿಯ ಹಿಂದುಳಿದ ವರ್ಗದ ನೇತಾರನನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ಕೋಲಿ ಸಮಾಜ: ಕೋಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ, ವಿಧಾನಸಭೆಯ ಮಾಜಿ ಮುಖ್ಯ ಸಚೇತಕರಾಗಿ ಕರ್ತವ್ಯ ನಿರ್ವಹಿಸಿ ಜನರ ವಿಶ್ವಾಸ ಗೆದ್ದ ವಿಠಲ್‌ ಹೆರೂರ ಅವರ ನಿಧನದಿಂದಾಗಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕ ಹೇಳಿದೆ.

ಕೋಲಿ ಸಮಾಜವನ್ನು ರಾಜ್ಯ­ದಾದ್ಯಂತ ಸಂಘಟಿಸಿ ಅನೇಕ ಜನರಿಗೆ ನ್ಯಾಯ ದೊರಕಿಸಿಕೊಟ್ಟವರು.  ಸಾಮಾಜಿಕವಾಗಿ ಅಭಿವೃದ್ಧಿ ಸಾಧಿ­ಸಲು ಮಾರ್ಗದರ್ಶನ ಮಾಡಿ­ದವರು. ಅವರನ್ನು ಕಳೆದುಕೊಂಡ ಸಮಾಜ ಬಡವಾಗಿದೆ ಎಂದು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಪ್ರಕಟಣೆಯಲ್ಲಿ ಕೋರಿದ್ದಾರೆ.

ಶಹಾಪುರ: ಹಿಂದುಳಿದ ನಾಯಕ ಹಾಗೂ ಮಾಜಿ ಮುಖ್ಯ ಸಚೇತಕ ವಿಠಲ ಹೇರೂರ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹಿಂದುಳಿದ ನಾಯಕನಾಗಿ ಸಮಾಜದ ಏಳ್ಗಿಗೆ ಶ್ರಮಿಸಿದ ಹಾಗೂ ನೇರ ಹಾಗೂ ದಿಟ್ಟ ಮಾತುಗಾರ­ರಾಗಿದ್ದ ವಿಠಲ ಹೇರೂರ ಸಾವು ತುಂಬಲಾರದ ನಷ್ಟವಾಗಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪೂರ, ಸಿಪಿಐ (ಎಂ) ಕಾರ್ಯಾದರ್ಶಿ ಎಸ್‌.ಎಂ.ಸಾಗರ, ತಳ ಸಮುದಾಯ ಸಂಘಟನೆಯ ಸಂಚಾಲಕ ಆರ್‌.ಚೆನ್ನಬಸು ವನದುರ್ಗ, ತಾಲ್ಲೂಕು ಕೋಲಿ (ಕಬ್ಬಲಿಗ) ಸಮಾಜದ ಸದಸ್ಯರು ಸಂತಾಪ ಸೂಚಿಸಿದ್ದಾರೆ.

ಪರಿಷತ್‌ನಲ್ಲಿ ಸಭೆ: ನೂತನ ವಕೀಲರ ಪರಿಷತ್ತಿನಲ್ಲಿ ಮಂಗಳವಾರ ತುರ್ತು ಸಭೆ ಸೇರಿ ವಿಠಲ ಹೇರೂರು ನಿಧನಕ್ಕೆ ಸಂತಾಪ ಸೂಚಿಸಿಲಾಯಿತು. ಪರಿಷತ್‌ ಅಧ್ಯಕ್ಷೆ ಸತ್ಯಮ್ಮ ಹೊಸ್ಮನಿ, ಅಂಬರೇಶ ಇಟಗಿ, ಉಮೇಶ ಕುಲಕರ್ಣಿ ಇದ್ದರು.

ಗುರುಮಠಕಲ್: ವಿಠಲ್ ಹೆರೂರ್ ನಿಧನದ ಹಿನ್ನೆಲೆಯಲ್ಲಿ ಗಂಗಾಮತ ಕೋಲಿ ಸಮಾಜದ ಗುರುಮಠಕಲ್ ಮತಕ್ಷೇತ್ರ ಘಟಕ, ನಗರ ಘಟಕ ಮತ್ತು ಅವರ ಅಭಿಮಾನಿಗಳು ಪಟ್ಟಣದ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ  ಸಭೆ ನಡೆಸಿ, ಅಗಲಿದ ನಾಯಕನಿಗೆ ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮತಕ್ಷೇತ್ರ ಘಟಕದ ಅಧ್ಯಕ್ಷ ಚುಕ್ಕಪ್ಪ ನಾಯಕ, ‘ವಿಠಲ್ ಹೆರೂರ ಅವರು ಕೇವಲ ಒಂದು ಶಕ್ತಿಯಾಗದೇ, ಕೋಲಿ ಸಮಾಜದ ದೊಡ್ಡ ಆಸ್ತಿಯಾಗಿದ್ದರು’ ಎಂದು ಹೇಳಿದರು.

ಆನಂದ ಕುಮಾರ ಯದ್ಲಾಪೂರ, ಭೀಮಾ­ಶಂಕರ ಪಡಿಗೆ, ವೆಂಕಟಪ್ಪ ಅವಾಂಗಪೂರ, ವೆಂಕಟಪ್ಪ ಮನ್ನೆ, ವೆಂಕಟರಾಮುಲು ಪೇದ್ದಬೋಯಿ, ರಾಮುಲು ಕೊಡಗಂಟಿ, ಲಕ್ಷ್ಮಪ್ಪ ಮಜ್ಜಿಗೆ, ದೇವಪ್ಪ ಕೋರೆಬನ್, ಪಂಢರಿ ದೋಡ್ಲಾ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.