ADVERTISEMENT

‘ನೇತಾಜಿ ಕನಸು ಪೂರ್ಣಗೊಳಿಸಲು ಶ್ರಮಿಸಿ’

ಯಾದಗಿರಿಯಲ್ಲಿ ಸುಭಾಷಚಂದ್ರ ಬೋಸ್‌ರ ಜಯಂತ್ಯುತ್ಸವದಲ್ಲಿ ರಮೇಶ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 9:44 IST
Last Updated 30 ಜನವರಿ 2016, 9:44 IST
ಯಾದಗಿರಿಯ ಚಂದ್ರಶೇಖರ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ನೇತಾಜಿ ಜಯಂತ್ಯುತ್ಸವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಮೇಶ ಲಂಡನ್ಕರ್‌ ಮಾತನಾಡಿದರು
ಯಾದಗಿರಿಯ ಚಂದ್ರಶೇಖರ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ನೇತಾಜಿ ಜಯಂತ್ಯುತ್ಸವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಮೇಶ ಲಂಡನ್ಕರ್‌ ಮಾತನಾಡಿದರು   

ಯಾದಗಿರಿ: ಬ್ರಿಟಿಷರನ್ನು ದೇಶದಿಂದ ಹೊರಹಾಕವುದಷ್ಟೇ ಅಲ್ಲದೇ ಬಂಡವಾಳ ಶಾಹಿ ವ್ಯವಸ್ಥೆಯನ್ನು ಕಿತ್ತೊಗೆಯಬೇಕು ಎಂಬುದು ನೇತಾಜಿ ಅವರ ಕನಸಾಗಿತ್ತು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಮೇಶ ಲಂಡನ್ಕರ್‌ ಹೇಳಿದರು.

ನಗರದ ಚಂದ್ರಶೇಖರ ಪದವಿ ಮಹಾವಿದ್ಯಾಲಯದಲ್ಲಿ ಎಐಡಿಎಸ್‌ಒ ಸಂಘಟನೆಯಿಂದ ಶುಕ್ರವಾರ ಹಮ್ಮಿಕೊಂ ಡಿದ್ದ ನೇತಾಜಿಯವರ ಜಯಂತ್ಯುತ್ಸವ ದಲ್ಲಿ ಅವರು ಮಾತನಾಡಿದರು.

ನೇತಾಜಿಯವರಂತಹ ಕ್ರಾಂತಿಕಾ ರಿಗಳ ಹಾಗೂ ಮಹಾನ್‌ ವ್ಯಕ್ತಿಗಳ ಆದರ್ಶಗಳ ಬಗ್ಗೆ ನಮ್ಮ ಪಠ್ಯಪುಸ್ತಕಗ ಳಲ್ಲಿ ಸೇರಿಸದೇ ಮುಚ್ಚಿ ಹಾಕಲಾಗಿದೆ. ಮೋಜು, ಮಸ್ತಿಯಂತಹ ಸಂಸ್ಕೃತಿಯ ನ್ನು ಯುವಜನರ ನಡುವೆ ವ್ಯಾಪಕವಾಗಿ ಹರಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.  

ಅನ್ಯಾಯದ ವಿರುದ್ಧ ಹೋರಾಡಿದ ಕೆಚ್ಚೆದೆಯ ವೀರ ನೇತಾಜಿಯವರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ, ಸುತ್ತಲಿನ ಬಡತನ ಹಾಗೂ ಹಲವಾರು ವಿಷಯಗಳ ಬಗ್ಗೆ ಆಲಿಸುತ್ತಿದ್ದರು. ಕಾಲೇಜು ದಿನಗಳನ್ನು ಮುಗಿಸಿದ ನಂತರ ತಂದೆಯ ಅಭಿಪ್ರಾಯದಂತೆ ಐ.ಸಿ.ಎಸ್ ಮುಗಿಸಿದರು. ಆದರೆ ಬಡತನ, ಅನ್ಯಾಯ ಇವುಗಳೆಲ್ಲವನ್ನು ನೋಡಿ ಉನ್ನತ ಪದವಿಯನ್ನು ನಿರಾಕರಿಸಿದರು ಎಂದು ತಿಳಿಸಿದರು.

ಬ್ರಿಟಿಷರನ್ನು ಭಾರತದಿಂದ ಓಡಿಸಿ, ಭಾರತೀಯರ ವಿಮುಕ್ತಿಗಾಗಿ ಪಣ ತೊಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು, ಪುರುಷರಷ್ಟೇ ಅಲ್ಲದೇ ಮಹಿಳೆಯರು ಕೂಡು ಭಾಗವಹಿಸಲು ಝಾನ್ಸಿ ರಾಣಿ ರೆಜಿಮೆಂಟ್ ಸೇನಾ ತುಕುಡಿ ಕಟ್ಟಿ ಹೋರಾಡಿದ್ದರು ಎಂದು ವಿವರಿಸಿದರು.

ಎಸ್‌ಯುಸಿಐ (ಸಿ) ಕಲಬುರ್ಗಿ ಜಿಲ್ಲಾ ಘಟಕದ ಸದಸ್ಯ ರಾಮಣ್ಣ ಇಬ್ರಾಹಿಂಪೂರ ಮಾತನಾಡಿ, ನಮ್ಮ ದೇಶದ ಸ್ವಾತಂತ್ರ್ಯ ಚಳಿವಳಿಯಲ್ಲಿ ಎರಡು ಪಂಥಗಳಿದ್ದವು. ಒಂದು ರಾಜಿಪರ ಪಂಥ. ಈ ಪಂಥವು ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿ ಕೊಂಡು ಹೋಗುತ್ತಿತ್ತು. ಇನ್ನೊಂದು ಸಂಧಾನತೀತ ಪಂಥ. ಇದು ಅನ್ಯಾಯದ ವಿರುದ್ಧ ಕ್ರಾಂತಿಕಾರಿ ಹೋರಾಟಗಳನ್ನು ಬೆಳೆಸಿ, ಬದಲಾವಣೆ ತರುಬೇಕು ಎನ್ನುವ ಆಶಯ ಹೊಂದಿತ್ತು. ಈ ಪಂಥದಲ್ಲಿ ನೇತಾಜಿ ಮುಂಚೂಣಿಯಲ್ಲಿದರು ಎಂದು ತಿಳಿಸಿದರು.

ಚುನಾವಣೆಗಳ ಮೂಲಕ ನಮ್ಮ ದೇಶದಲ್ಲಿ ಬದಲಾವಣೆ ಆಗುವುದಿಲ್ಲ. ಬದಲಿಗೆ ಸರ್ಕಾರಗಳು ಬದಲಾಗುತ್ತವೆ. ನಮ್ಮ ದೇಶದಲ್ಲಿ ಸಮಾಜವಾದ ಸ್ಥಾಪನೆ ಆಗಬೇಕೆಂಬ ನೇತಾಜಿಯವರ ಕನಸು ಅಪೂರ್ಣವಾಗಿದೆ. ಇಂದಿನ ವಿದ್ಯಾರ್ಥಿ ಯುವಜನತೆ  ನೇತಾಜಿಯವರ ಅಪೂರ್ಣವಾದ ಕಾಯಕವನ್ನು ಪೂರ್ಣಗೊಳಿಸಲು ಶ್ರಮಿಸುವ ಮೂಲಕ ನಾವು ಅವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ಚಂದ್ರಶೇಖರ ಪದವಿ ಕಾಲೇಜಿನ ಪ್ರಾಂಶುಪಾಲ ಆರ್.ಎಂ. ಕೊನಿಮನಿ ಮಾತನಾಡಿ, ದೇಶಕ್ಕಾಗಿ ಬಲಿದಾನ ಮಾಡಿದ ನೇತಾಜಿಯವರಂತಹ ಮಹಾ ನ್‌ ವ್ಯಕ್ತಿಗಳ ಆದರ್ಶಗಳನ್ನು ಯುವಜ ನರು ಅನುಸರಿಸಿ ಉತ್ತಮ ವಿದ್ಯಾರ್ಥಿಗ ಳಾಗಬೇಕು ಎಂದು ತಿಳಿಸಿದರು.

ಎಐಡಿಎಸ್‌ಒ ಕಲಬುರ್ಗಿ ಜಿಲ್ಲಾ ಘಟಕದ ಕಾರ್ಯದರ್ಶಿ ಹಣಮಂತ ಎಸ್.ಎಚ್. ಮಾತನಾಡಿ, ಇಂದು ನೇತಾಜಿಯವರ ಕನಸು ಕನಸಾಗಿಯೇ ಉಳಿದಿದೆ. ಶಿಕ್ಷಣ ದುಬಾರಿಯಾಗುತ್ತಿದೆ, ಶಿಕ್ಷಣ ಮಾರಾಟದ ವಸ್ತುವಲ್ಲ. ಶಿಕ್ಷಣ ಮೂಲಭೂತ ಹಕ್ಕು. ಎಲ್ಲ ಯುವಕರಿಗೆ ಜೀವನದ ಭದ್ರತೆಗೆ ಉದ್ಯೋಗ ನೀಡಬೇಕು, ಇಂದಿನ ಸರ್ಕಾರಗಳು ಅಶ್ಲೀಲ ಸಿನಿಮಾ, ಸಾಹಿತ್ಯದಿಂದ ಉನ್ನತ ನೀತಿಯ ಬೆನ್ನೆಲುಬನ್ನು ಮುರಿದು ಯುವಕರ ದಾರಿ ತಪಿಸುತ್ತಿವೆ. ಆದ್ದರಿಂದ ಎಐಡಿಎಸ್‌ಒ ನೇತಾಜಿಯವರ ಆದರ್ಶ ಜೀವನವನ್ನು ವಿದ್ಯಾರ್ಥಿ ಯುವಜನರ ಮುಂದಿಟ್ಟು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಸರ್ಕಾರದ ಹೀನ ಪಿತೂರಿಯ ವಿರುದ್ಧ ಹೋರಾಡುತ್ತಿದೆ. ಇಂತಹ ಹೋರಾಟಗಳಲ್ಲಿ ವಿದ್ಯಾರ್ಥಿ ಗಳು, ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸೈದಪ್ಪ ಎಚ್.ಪಿ, ಸುಭಾಷ, ಕಾಶಿನಾಥ, ದೇವಿಂದ್ರಪ್ಪ, ಸಂತೋಷ, ಮಲ್ಲಿಕಾರ್ಜುನ, ಸುಜಾತ, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬಡತನ, ದಾರಿದ್ರ್ಯ, ಮಾನವನಿಂದ ಮಾನವನ ಶೋಷಣೆ ವಿರುದ್ಧ ಮತ್ತು ಸಮಾನತೆಗಳನ್ನು ತರುವುದಕ್ಕಾಗಿ ನೇತಾಜಿ ಹೋರಾಟ ಮಾಡಿದ್ದರು.
– 
ಡಾ. ರಮೇಶ ಲಂಡನ್ಕರ್‌,
ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.