ಯಾದಗಿರಿ: ಕಲ್ಯಾಣ ಕ್ರಾಂತಿಯ ಸಂದ ರ್ಭದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರು ಅಮೂಲ್ಯವಾದ ನಕ್ಷತ್ರರಂತೆ ಕಂಗೊಳಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.
ನಗರದ ವಿದ್ಯಾಮಂಗಲ ಕಾರ್ಯಾಲ ಯದಲ್ಲಿ ಗುರುವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಅಂಗವಾಗಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
12 ನೇ ಶತಮಾನ ಶರಣರ ಕಾಲ ಘಟ್ಟ. ಈ ಎಲ್ಲ ಶರಣರಲ್ಲಿ ಅಮೂಲ್ಯ ನಕ್ಷತ್ರದಂತೆ ಇದ್ದ ಅಂಬಿಗರ ಚೌಡಯ್ಯ ಅವರು, ತಮ್ಮ ಕಟುವಾದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾ ರ್ಯ ಮಾಡಿದರು ಎಂದು ಹೇಳಿದರು.
ಅಂಬಿಗರಾಗಿದ್ದ ಚೌಡಯ್ಯನವರ ಜನಾಂಗ ನಂಬಿಗಸ್ತರು. ಸುರಕ್ಷಿತವಾಗಿ ಹೊಳೆ ದಾಟಿಸುವ ಮೂಲಕ ಜನರನ್ನು ಸುರಕ್ಷಿತವಾಗಿ ಸ್ಥಳವನ್ನು ತಲುಪಿಸುವ ನಂಬಿಗಸ್ತ ಜನಾಂಗದವರು ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಚಂದ್ರಶೇಖರ ಹಿಳ್ಳಿ, ಕರ್ನಾಟಕ ಕಂಡ ಅಪ್ರತಿಮ ವಚನಕಾರ ಅಂಬಿಗರ ಚೌಡಯ್ಯ ಅವರು, ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಿಜಶರಣ ರೆಂದೇ ಬಿರುದನ್ನು ಪಡೆದಿದ್ದರು.
ನೇರ ವಿಚಾರ ಧಾರೆಯುಳ್ಳ ಹಾಗೂ ನಿರ್ಭೀತಿ ಯಿಂದ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಅವ್ಯವಸ್ಥೆಯ ನ್ನು ಟೀಕಿಸಿದರು. ಸಮಾನತೆಯನ್ನು ಸಾರಿದ ಅವರು, ಹಲವಾರು ವಚನಗಳ ಮೂಲಕ ಶರಣರ ಮನಗೆದ್ದಿದ್ದರು ಎಂದು ಹೇಳಿದರು.
ಕಲಬುರ್ಗಿ ಕಾಡಾ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಕಂದಕೂರ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿ ಮಾಲಿ ಪಾಟೀಲ್, ನಗರಸಭೆ ಅಧ್ಯಕ್ಷ ಸುರೇಶ ಕೋಟಿಮನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪ್ರಕಾಶ ರೆಡ್ಡಿ ನಜರಾಪೂರ, ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್,
ಉಪವಿಭಾಗಾಧಿಕಾರಿ ದುರ್ಗೇಶ ರುದ್ರಾಕ್ಷಿ, ಡಿಎಸ್ಪಿ ಆರ್.ಬಿ. ಬಸರಗಿ, ಸಮಾಜದ ಮುಖಂಡರಾದ ಮೌಲಾಲಿ ಅನಪುರ, ಉಮೇಶ ಮುದ್ನಾಳ, ಹಣಮಂತ ಬಳಿಚಕ್ರ, ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ವಂದಿಸಿದರು.
ಇದಕ್ಕೂ ಮೊದಲು ಇಲ್ಲಿಯ ಸುಭಾಷ ವೃತ್ತದಿಂದ ವಿದ್ಯಾ ಮಂಗಲ ಕಾರ್ಯಾಲಯದವರೆಗೂ ಅಂಬಿಗರ ಚೌಡಯ್ಯನ ಭಾವಚಿತ್ರದ ಮೆರವಣಿಗೆ ನಡೆಯಿತು.
***
ಅಂಬಿಗರ ಚೌಡಯ್ಯನವರ ವಚನಗಳಲ್ಲಿನ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.
-ಬಾಬುರಾವ ಚಿಂಚನಸೂರ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.