ADVERTISEMENT

‘ಸಂಘಟನೆಗಳ ಪಾತ್ರ ಮಹತ್ತರ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:30 IST
Last Updated 3 ಮಾರ್ಚ್ 2014, 10:30 IST

ಯಾದಗಿರಿ: ಸ್ಪರ್ಧಾತ್ಮಕ ಯುಗದಲ್ಲಿ ಸಂಘ–ಸಂಸ್ಥೆಗಳು ಸಮಾಜಮುಖಿ ಕೆಲಸವನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ನಾಡಿನ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ರವೀಂದ್ರ ಕಾರಬಾರಿ ಹೇಳಿದರು.
ನಗರದ ಮಹಾವೀರ ಭವನದಲ್ಲಿ ಭಾನುವಾರ ಮಾರವಾಡಿ ಯುವ ಮಂಚ್‌ ಹಮ್ಮಿಕೊಂಡಿದ್ದ ಅಂಗವಿಕ­ಲರಿಗೆ ತ್ರಿಚಕ್ರ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸರ್ಕಾರ ಮಾಡದಂತ ಕೆಲಸಗಳನ್ನು ಆಯಾ ಭಾಗದ ಸಂಘ– ಸಂಸ್ಥೆಗಳು ಮಾಡುವ ಮೂಲಕ ಜನರ ಮೆಚ್ಚುಗೆ ಗಳಿಸಿವೆ. ನಾಗರಿಕ ಸಮಾಜದಲ್ಲಿ ಹಲವಾರು ನಿಂದನೆ­ಗಳಿಗೆ ಒಳಗಾದ ಜಿಲ್ಲೆಯಲ್ಲಿರುವ ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ತಮ್ಮ ದೈನಂದಿನ ಚಟುವ­ಟಿಕೆಗಳನ್ನು ಕೈಗೊಳ್ಳಲು ಸಹಕಾರಿಯಾ­ಗುತ್ತದೆ ಎಂದು ತಿಳಿಸಿದರು.

ಅಂಗವಿಕಲರಲ್ಲೂ ಅಗಾಧವಾದ ಪ್ರತಿಭೆಯಿದೆ. ಅವರಿಗೆ ನಾವೆಲ್ಲರೂ ಅಗತ್ಯ ಸಹಾಯ ಸಹಕಾರ ನೀಡಿದಲ್ಲಿ, ಅವರು ಕೂಡಾ ಸಮಾಜದ ಮುಖ್ಯ­ವಾಹಿನಿಗೆ ಬರುತ್ತಾರೆ. ದೇಶದಲ್ಲಿ ಸುಮಾರು 15 ಲಕ್ಷ ಜನ ಅಂಗವಿಕಲರಿ­ದ್ದಾರೆ. ಅವರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ, ಸರಿಯಾಗಿ ತಲುಪುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಭಗವಂತ ಅನವಾರ ಮಾತನಾಡಿ, ಅಂಗವಿಕಲತೆ ಎಂಬುದು ಕೆಲವರಲ್ಲಿ ಹುಟ್ಟಿನಿಂದ ಬಂದರೆ, ಕೆಲವರಿಗೆ ಬದುಕಿನ ಮಧ್ಯೆ ಸಂಭವಿಸುವ ಘಟನೆಗಳಿಂದ ಬಂದಿರು­ತ್ತದೆ. ಸಮಾಜದಲ್ಲಿರುವ ಶ್ರೀಮಂತ ದಾನಿಗಳು ಇಂಥವರಿಗೆ ಸ್ಪಂದಿಸುವ ಮೂಲಕ ಅವರ ಬದುಕಿನಲ್ಲಿ ಹೊಸ ಬೆಳಕು ಮೂಡಿಸುತ್ತಿರುವುದು ಬದ­ಲಾವಣೆ ಸಂಕೇತ. ಯುವ ಮಂಚ್‌ ವೇದಿಕೆ ಕಾರ್ಯಕರ್ತರು ಮೊದಲಿ­ನಿಂದಲು ಹಲವಾರು ಕಾರ್ಯಕ್ರಮ­ಗಳ ಮೂಲಕ ಜನರ ಸೇವೆ ಮಾಡು­ವಲ್ಲಿ ನಿರತವಾಗಿದ್ದಾರೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಮಂಚ್‌ ಅಧ್ಯಕ್ಷ ವಿಜಯ­ಕುಮಾ­ರ­ಗೌಡ, ಮಂಚ್‌ ಕೈಗೊಂಡಿ­ರುವ ಯೋಜನೆಗಳನ್ನು ವಿವರಿಸಿ, ಜಿಲ್ಲೆಯ 30 ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ವಿತರಿಸುವ ಗುರಿ ಹೊಂದ­ಲಾಗಿದೆ. ಮೊದಲ ಹಂತವಾಗಿ ಹತ್ತು ಜನರಿಗೆ ಸೈಕಲ್‌ ನೀಡಲಾಗಿದೆ ಎಂದರು.

ಗಂಜ್‌ ವರ್ತಕರ ಸಂಘದ ಅಧ್ಯಕ್ಷ ಬಾಬು ದೋಖಾ, ತ್ರಿಚಕ್ರ ಸೈಕಲ್ ದಾನಿ ವಿಜಯಕುಮಾರ ಗಾಂಧಿ, ನಗರಸಭೆ ಅಧ್ಯಕ್ಷ ಮಹ್ಮದ್‌ ಇಸಾಕ್, ಕಾಂತಿಲಾಲ ದೋಖಾ, ಆನಂದ್ ಗೌರ್, ಅಶೋಕ ಜೈನ್‌, ದಿಲೀಪ ದೋಖಾ, ಆನಂದ ಜವಾಹರ್, ಜಂಬು ಸೋಲಂಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.