ADVERTISEMENT

ಯಾದಗಿರಿ | ಮತ್ತೆ 11 ಜನರಿಗೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 8:55 IST
Last Updated 9 ಜುಲೈ 2020, 8:55 IST

ಯಾದಗಿರಿ: ಜಿಲ್ಲೆಯಲ್ಲಿ ಬುಧವಾರ ಒಟ್ಟು 11 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 1,027 ಪ್ರಕರಣಗಳ ಪೈಕಿ 872 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್.ಜಿ.ರಜಪೂತ್ ಅವರು ತಿಳಿಸಿದ್ದಾರೆ.

ಯಾದಗಿರಿ ನಗರದ ಅಂಬೇಡ್ಕರ್ ಚೌಕ್‌ನ 29 ವರ್ಷದ ಮಹಿಳೆ, ಹುಣಸಗಿ ತಾಲ್ಲೂಕಿನ ಗಬಸಾವಳಿ ಕುರೆಕನಾಳ ಗ್ರಾಮದ 20 ವರ್ಷದ ಯುವಕ, ಶಹಾಪುರ ತಾಲ್ಲೂಕಿನ ಹಳಿಸಗರ ಗ್ರಾಮದ 20 ವರ್ಷದ ಯುವತಿ, ಯಾದಗಿರಿಯ ಹತ್ತಿಕಟ್ಟ ಏರಿಯಾದ 42 ವರ್ಷದ ಪುರುಷ, ಸುರಪುರ ಬಸ್ ಡಿಪೊದ 40 ವರ್ಷದ ಪುರುಷ, 46 ವರ್ಷದ ಪುರುಷ, ಸುರಪುರ ತಾಲ್ಲೂಕಿನ ಕೆಂಭಾವಿ ನಗರದ 26 ವರ್ಷದ ಯುವಕ, ಸುರಪುರ ತಾಲ್ಲೂಕಿನ ಬೈಪಾಸ್ ರಸ್ತೆಯ 34 ವರ್ಷದ ಪುರುಷ, ಸುರಪುರ ತಾಲ್ಲೂಕಿನ ದಿವಳಗುಡ್ಡ ಗ್ರಾಮದ 35 ವರ್ಷದ ಮಹಿಳೆ, ದಿವಳಗುಡ್ಡ ಗ್ರಾಮದ 68 ವರ್ಷದ ಪುರುಷ, ದಿವಳಗುಡ್ಡ ಗ್ರಾಮದ 62 ವರ್ಷದ ಮಹಿಳೆ ಕೊರೊನಾ ಸೋಂಕು ತಗುಲಿದೆ.

ಯಾದಗಿರಿಯ ಅಂಬೇಡ್ಕರ್ ಚೌಕ್, ಹತ್ತಿಕಟ್ಟ ಏರಿಯಾ ಹಾಗೂ ಸುರಪುರ ಬೈಪಾಸ್ ರಸ್ತೆಯ ವ್ಯಕ್ತಿಗಳ ಸಂಪರ್ಕದ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದೆ. ಸುರಪುರ ಬಸ್ ಡಿಪೊದ ಇಬ್ಬರು ಪಿ-10660 ವ್ಯಕ್ತಿಯ ಸಂಪರ್ಕದ ಹಿನ್ನೆಲೆ ಹೊಂದಿದ್ದಾರೆ. ಗಬಸಾವಳಿ ಕುರೆಕನಾಳ ಗ್ರಾಮದ ವ್ಯಕ್ತಿ ಬೆಂಗಳೂರಿನಿಂದ, ಹಳಿಸಗರದ ವ್ಯಕ್ತಿ ಕರ್ಜಿಗಿ ವಿಜಯಪುರದಿಂದ ಮತ್ತು ಕೆಂಭಾವಿಯ ವ್ಯಕ್ತಿ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ದಿವಳಗುಡ್ಡದ ಮೂವರು ಪಿ-15476 ವ್ಯಕ್ತಿಯ ಸಂಪರ್ಕದ ಹಿನ್ನೆಲೆ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.