ADVERTISEMENT

ಯಾದಗಿರಿ ಜಿಲ್ಲೆಯಲ್ಲಿ 236 ಜನರಿಗೆ ಕೋವಿಡ್‌ ದೃಢ

ಮೂರು ಅಂಕಿಯಲ್ಲಿ ಪತ್ತೆಯಾದ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 16:30 IST
Last Updated 16 ಆಗಸ್ಟ್ 2020, 16:30 IST

ಯಾದಗಿರಿ: ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಭಾನುವಾರ ಮೂರು ಅಂಕಿಯಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.ಭಾನುವಾರಕೋವಿಡ್‌ ಸ್ಫೋಟವಾಗಿದ್ದು ಬರೋಬ್ಬರಿ236 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ದಿನದಿಂದ ಇಲ್ಲಿಯವರೆಗೆ ಇದು ಅತಿ ಹೆಚ್ಚು ಸೋಂಕು ಪತ್ತೆಯಾದ ಪ್ರಕರಣವಾಗಿದೆ.

ಯಾಕಿಷ್ಟು ಕೋವಿಡ್‌ ಪ್ರಕರಣಗಳು:

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕಳೆದ 2–3 ದಿನಗಳಲ್ಲಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ನಡೆಯುತ್ತಿರಲಿಲ್ಲ. ಹೀಗಾಗಿ ಬಾಕಿ ಉಳಿದವುಗಳನ್ನು ಬೆಂಗಳೂರಿನ ಲ್ಯಾಬ್‌ಗೆಕಳಿಸಿದ್ದರಿಂದ ಅಲ್ಲಿ ಪರೀಕ್ಷೆ ನಡೆಸಿದ್ದರಿಂದ ಒಂದೇ ದಿನ ಇಷ್ಟೊಂದು ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಸೋಂಕಿತರ ಸಂಖ್ಯೆ3,837ಕ್ಕೆಏರಿಕೆಯಾಗಿದ್ದು, ಭಾನುವಾರ38 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ2,518ಜನ ಚೇತರಿಸಿಕೊಂಡಿದ್ದಾರೆ.1,296 ಸಕ್ರಿಯ‍ಪ್ರಕರಣಗಳಿವೆ. ಮೂವರು ಮೃತಪಟ್ಟಿದ್ದು, 23ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ.

68 ವರ್ಷದಇಬ್ಬರು ಪುರುಷರು ಸ್ಯಾರಿ,58 ವರ್ಷದ ಪುರುಷ ಐಎಲ್‌ಐ ಹಿನ್ನೆಲೆಯಿಂದ ಮರಣಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಯಾದಗಿರಿಯ ಕೋವಿಡ್‌ ಆಸ್ಪತ್ರೆಯ ಐಸಿಯುನಲ್ಲಿ 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲೆಲ್ಲಿ ಎಷ್ಟು ಪ್ರಕರಣ:

ಯಾದಗಿರಿ ತಾಲ್ಲೂಕಿನಲ್ಲಿ 75, ಗುರುಮಠಕಲ್‌ ತಾಲ್ಲೂಕಿನಲ್ಲಿ 17, ಶಹಾಪುರ ತಾಲ್ಲೂಕಿನಲ್ಲಿ 78, ವಡಗೇರಾ ತಾಲ್ಲೂಕಿನಲ್ಲಿ 5, ಸುರಪುರತಾಲ್ಲೂಕಿನಲ್ಲಿ 25, ಹುಣಸಗಿತಾಲ್ಲೂಕಿನಲ್ಲಿ 36 ಸೇರಿದಂತೆ ಒಟ್ಟು 236 ಜನರಲ್ಲಿ ಕೋವಿಡ್‌ ಪತ್ತೆಯಾಗಿದೆ.

ಕೋವಿಡ್‌ ಅಂಕಿ ಅಂಶ
ಜಿಲ್ಲೆಯಲ್ಲಿ ಒಟ್ಟು;3,837
ದಿನದ ಏರಿಕೆ;236
ಗುಣಮುಖ;38
ಸಕ್ರಿಯ:1,296
ಸಾವು;23

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.