ADVERTISEMENT

25 ಸಾವಿರ ಕುರಿ, ಮೇಕೆಗಳಿಗೆ ಪಿಪಿಆರ್ ಲಸಿಕೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 6:50 IST
Last Updated 9 ಜೂನ್ 2011, 6:50 IST

ಯಾದಗಿರಿ: ಎನ್‌ಸಿಪಿ-ಪಿಪಿಆರ್ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 25,137 ಕುರಿ, ಮೇಕೆಗಳಿಗೆ ಪಿಪಿಆರ್ ಲಸಿಕೆ ಹಾಕಲಾಗಿದ್ದು, ಶೇ. 76.09 ರಷ್ಟು ಸಾಧನೆ ಮಾಡಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಎಚ್.ಎನ್. ರಾಮಮೋಹನ ತಿಳಿಸಿದರು.

ಯೋಜನೆಯಡಿ ತಾಲ್ಲೂಕಿನ ಚಾಮನಾಳದಲ್ಲಿ ಕುರಿ, ಮೇಕೆಗಳಿಗೆ ಪಿಪಿಆರ್ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಗ್ರಾಮಸ್ಥರಿಗೆ ಈ ಮಾಹಿತಿ ನೀಡಿದರು.

ಜೂನ್ 6ರಿಂದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಜೂನ್ 8 ರವರೆಗೆ 25 ಸಾವಿರ ಕುರಿಗಳಿಗೆ ಲಸಿಕೆ ಹಾಕಲಾಗಿದೆ. 12 ರಕ್ತದ ಮಾದಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ. ಷಣ್ಮುಖ ಮಾತನಾಡಿ, ಗುರುವಾರ (ಜೂ.9) ಯಾದಗಿರಿ ತಾಲ್ಲೂಕಿನ ಅಲ್ಲಿಪೂರ, ಶಹಾಪುರ ತಾಲ್ಲೂಕಿನ ಬೆಂಡೆಬೆಂಬಳಿ, ಬೂದಿನಾಳ, ಹಬಸಿಯಾಳ, ಬೆನಕನಳ್ಳಿ, ಸುರಪುರ ತಾಲ್ಲೂಕಿನ ಜಾಲಿಬೆಂಚಿ ಗ್ರಾಮಗಳಲ್ಲಿ ಲಸಿಕೆ ಹಾಕಲಾಗುವುದು.

ಜೂನ್ 10 ರಂದು ಯಾದಗಿರಿ ತಾಲ್ಲೂಕಿನ ಅಲ್ಲಿಪೂರ, ಕಂಚಗಾರ ಹಲ್ಳಿ, ವೆಂಕಟೇಶ ನಗರ, ಶಹಾಪುರ ತಾಲ್ಲೂಕಿನ ಇಟಗಾ ಸ್ಮಿತ್ ವಡಗೇರಾ, ಕುಮನೂರ, ಕಂದಳ್ಳಿ, ಶಿವನೂರು, ಸುರಪುರ ತಾಲ್ಲೂಕಿನ ಮಾಚಗೊಂಡನಹಳ್ಳಿ, ದೇವರಗೋನಾಳ ಗ್ರಾಮಗಳಲ್ಲಿ ಕುರಿ, ಮೇಕೆಗಳಿಗೆ ಲಸಿಕೆ ಹಾಕಲಾಗುವುದು. ಕುರಿ ಸಾಕಾಣಿಕೆದಾರರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಸಹಾಯಕ ನಿರ್ದೇಶಕ ಡಾ. ಟಿ.ಆರ್. ನರಸಿಂಹಯ್ಯ, ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.