ADVERTISEMENT

50 ಕೆಜಿ ಗಾಂಜಾ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 15:31 IST
Last Updated 12 ನವೆಂಬರ್ 2019, 15:31 IST
ಗುರುಮಠಕಲ್‌ ತಾಲ್ಲೂಕಿನ ಗಾಜರಕೋಟ್‌ ಗ್ರಾಮದಲ್ಲಿ ಗಾಂಜಾ ಬೆಳೆದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ
ಗುರುಮಠಕಲ್‌ ತಾಲ್ಲೂಕಿನ ಗಾಜರಕೋಟ್‌ ಗ್ರಾಮದಲ್ಲಿ ಗಾಂಜಾ ಬೆಳೆದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ   

ಯಾದಗಿರಿ: ಗುರುಮಠಕಲ್‌ ತಾಲ್ಲೂಕಿನ ಗಾಜರಕೋಟ್‌ ಗ್ರಾಮದಲ್ಲಿ ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ 25 ಕೆಜಿ ಗಾಂಜಾ ವಶಪಡಿಸಿಕೊಂಡು ಗಾಂಜಾ ಬೆಳೆದ ಶಿವಲಿಂಗಪ್ಪ ಬಬ್ಬೂರ ಎಂಬುವರನ್ನು ಬಂಧಿಸಿದ್ದಾರೆ.

ಹತ್ತಿ ಜಮೀನುಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ಶಿವಪುರ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ನರಸಯ್ಯ ಕಲಾಲ್‌ ಎಂಬುವರನ್ನು ಬಂಧಿಸಿ 25 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಅಬಕಾರಿ ಜಂಟಿ ಆಯುಕ್ತ ಎಸ್‌.ಕೆ.ಕುಮಾರ, ಉಪ ಆಯುಕ್ತೆ ಮಹಾದೇವಿಬಾಯಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ನಿರೀಕ್ಷಕ ಕೇದರನಾಥ ಎಸ್‌.ಟಿ., ಉಪ ನಿರೀಕ್ಷಕರಾದ ಶಬ್ಬೀರ್‌ ಬಿರಾದಾರ, ಶ್ರೀಧರ, ಶರಣು, ಅಬಕಾರಿ ರಕ್ಷಕ ಶರಣಪ್ಪ, ಪ್ರವೀಣಕುಮಾರ, ಮಹ್ಮದ್‌ ರಫಿ, ಶಿವಶರಣಪ್ಪ, ಶೇಖರ, ನೀಲಕಂಠ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.