ADVERTISEMENT

ಯಾದಗಿರಿ: ಮತ್ತೆ 51 ಕೋವಿಡ್‌ ಪ್ರಕರಣ ಪತ್ತೆ

ಜಿಲ್ಲಾಡಳಿತ ಭವನ ಸಂಪೂರ್ಣ ಸ್ಯಾನಿಟೈಸ್‌, 3 ದಿನ ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 16:12 IST
Last Updated 10 ಜುಲೈ 2020, 16:12 IST
ಯಾದಗಿರಿ ಜಿಲ್ಲಾಡಳಿತ ಭವನವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಸೋಂಕು ನಿವಾರಕ ದ್ರಾವಣ ಬಳಸಿ ಸ್ಯಾನಿಟೈಸ್ ಮಾಡಿದರು
ಯಾದಗಿರಿ ಜಿಲ್ಲಾಡಳಿತ ಭವನವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಸೋಂಕು ನಿವಾರಕ ದ್ರಾವಣ ಬಳಸಿ ಸ್ಯಾನಿಟೈಸ್ ಮಾಡಿದರು   

ಯಾದಗಿರಿ: ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಶುಕ್ರವಾರ ಒಂದೇ 51 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 1,094ಕ್ಕೆ ಏರಿಕೆಯಾಗಿದೆ.

30, 38, 29, 35, 26, 47, 33, 50, ವರ್ಷದ ಪುರುಷ, 58, 50,29, 36, ವರ್ಷದ ಮಹಿಳೆ, 7 ವರ್ಷದ ಬಾಲಕಿ ಸೇರಿದಂತೆ 51 ಜನರಿಗೆ ಕೋವಿಡ್‌ ದೃಢವಾಗಿದೆ.

ಕೊರೊನಾ ಸೋಂಕಿತ 51 ಜನರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.ಜಿಲ್ಲಾಡಳಿತ ಭವನದ 20ಕ್ಕೂ ಹೆಚ್ಚುಸಿಬ್ಬಂದಿಗೆ ಕೋವಿಡ್‌ದೃಢಪಟ್ಟಿದ್ದರಿಂದ ಅಧಿಕಾರಿಗಳು ಮನೆಯಿಂದಲೇ ಕೆಲಸ ನಿರ್ವಹಿಸಿದ್ದಾರೆ.

ADVERTISEMENT

ಸೋಂಕಿತರು ಪತ್ತೆಯಾಗಿರುವ ವಸತಿ ಗೃಹ ಮತ್ತು ಮನೆಗಳಲ್ಲಿರುವ10ರಿಂದ 20 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗುತ್ತಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ 5 ಜನ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 877 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.216 ಪ್ರಕರಣಗಳು ಸಕ್ರಿಯವಾಗಿವೆ. ಒಬ್ಬರು ಮೃತಪಟ್ಟಿದ್ದಾರೆ.

ಜಿಲ್ಲಾಡಳಿತ ಭವನಸೀಲ್‌ಡೌನ್‌: ಜಿಲ್ಲಾಡಳಿತ ಭವನದ ಸಿಬ್ಬಂದಿಯಲ್ಲಿ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದರಿಂದ ಭವನವನ್ನು ಮೂರು ದಿನಗಳ ಕಾಲ ಸೀಲ್‌ ಡೌನ್‌ ಮಾಡಲಾಗಿದೆ.ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಸೋಂಕು ನಿವಾರಕ ದ್ರಾವಣ ಬಳಸಿ ಸ್ಯಾನಿಟೈಸ್ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯ ಇಬ್ಬರು ಸಿಬ್ಬಂದಿ ಬೆಂಗಳೂರಿಗೆ ಹೋಗಿ ಬಂದಿರುವ ಹಿನ್ನೆಲೆಯಲ್ಲಿ ಹಾಗೂ ಸ್ವಯಂ ಪ್ರೇರಿತರಾಗಿ ಜುಲೈ 3 ರಂದು ಜಿಲ್ಲಾಡಳಿತ ಭವನದಲ್ಲಿ ಕೋವಿಡ್-19 ಪರೀಕ್ಷೆಗಾಗಿ ಅಧಿಕಾರಿ, ಸಿಬ್ಬಂದಿ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಹಾಗೂಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಅವರ ಕೋವಿಡ್ ವರದಿ ನೆಗೆಟಿವ್ ಬಂದಿವೆ. ಇನ್ನು ಕೆಲವು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವುದರಿಂದ ಜಿಲ್ಲಾಡಳಿತ ಭವನಕ್ಕೆ ಸಂಪೂರ್ಣ ಸ್ಯಾನಿಟೈಜಿಂಗ್ ಮಾಡಲಾಗುತ್ತಿದೆ. ಸಾರ್ವಜನಿಕ ಮತ್ತು ಆಡಳಿತ ಹಿತದೃಷ್ಟಿಯಿಂದ ಜುಲೈ 10 ರಿಂದ 3 ದಿನಗಳವರೆಗೆ ಜಿಲ್ಲಾಡಳಿತ ಭವನವನ್ನು ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲಾಗುತ್ತಿದ್ದು, ಜನರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೊರೊನಾ ಮಧ್ಯೆಯೂ ಚುನಾವಣೆ!

ಕೊರೊನಾ ನರ್ತನದ ಮಧ್ಯೆಯೂ ಜಿಲ್ಲಾ ಪಂಚಾಯಿತಿಅಧ್ಯಕ್ಷ ಚುನಾವಣೆ ನಡೆಸಲಾಯಿತು. ಜಿಲ್ಲಾಡಳಿತ ಭವನದಲ್ಲಿ 20ಕ್ಕೂಅಧಿಕಾರಿ, ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಆದರೂ ಅಧಿಕಾರಿಗಳು ಎಲ್ಲವನ್ನು ಬದಿಗಿಟ್ಟುಬೆಳಿಗ್ಗೆ ಜಿಲ್ಲಾಡಳಿತ ಭವನಕ್ಕೆ ಸ್ಯಾನಿಟೈಸ್ ಮಾಡಿ ಮಧ್ಯಾಹ್ನಚುನಾವಣೆ ನಡೆಸಿದರು.

ಕೊರೊನಾ ಪರೀಕ್ಷೆಗೆ ಕ್ಯೂ: ಜಿಲ್ಲಾಡಳಿತ ಭವನದ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದ್ದರಿಂದ ಉಳಿದ ಸರ್ಕಾರಿ ನೌಕರರು ಕೊರೊನಾ ಪರೀಕ್ಷೆಗಾಗಿ ಹಳೆ ಆಸ್ಪತ್ರೆಯಲ್ಲಿ ತೆರೆದಿರುವ ಗಂಟಲು ದ್ರವ ಮಾದರಿ ಸಂಗ್ರಹ ಘಟಕದಲ್ಲಿ ಕೊರೊನಾ ಪರೀಕ್ಷೆಗಾಗಿ ಕ್ಯೂ ನಿಂತು ಪರೀಕ್ಷೆ ಮಾಡಿಸಿಕೊಂಡಿರುವುದು ಶುಕ್ರವಾರ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.