ADVERTISEMENT

ಬಿಳಿಜೋಳ: ಉತ್ತಮ ಇಳುವರಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 6:04 IST
Last Updated 10 ಜನವರಿ 2018, 6:04 IST

ಶಹಾಪುರ: ‘ಹಿಂಗಾರು ಹಂಗಾಮಿನ ಬೆಳೆಯಾಗಿರುವ ಬಿಳಿಜೋಳ ಸದ್ಯ ಕಾಳು ಕಟ್ಟುವ ಹಂತದಲ್ಲಿದೆ. ಜೇಡಿಮಣ್ಣು ಮಿಶ್ರಿತ ಪ್ರದೇಶದಲ್ಲಿ ಬೆಳೆಗೆ ತೇವಾಂಶದ ಕೊರತೆ ಕಂಡು ಬಂದಿಲ್ಲ. ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ದಾನಪ್ಪ ಕತ್ನಳ್ಳಿ ತಿಳಿಸಿದ್ದಾರೆ.

‘ಪ್ರಸಕ್ತ ಬಾರಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ತೇವಾಂಶದ ಕೊರತೆ ಕಾಣಿಸಿಲ್ಲ. ಆದರೆ, ಗಡುಸು ಮಿಶ್ರಿತ ಜಮೀನುಗಳಲ್ಲಿ ತೇವಾಂಶದ ಕೊರತೆ ಕಂಡುಬಂದಿದೆ. ಯಾವುದೇ ರೋಗಬಾಧೆ ಇಲ್ಲದೆ ಜೋಳ ಚೆನ್ನಾಗಿ ಬೆಳೆದು ನಿಂತಿದೆ’ ಎಂದು ತಿಳಿಸಿದರು.

‘ಉತ್ತರ ಕರ್ನಾಟದಲ್ಲಿ ಪ್ರಮುಖ ಆಹಾರ ಬೆಳೆ ಇದಾಗಿದೆ. ಬೆಳೆಗೆ ಯಾವುದೇ ಕ್ರಿಮಿನಾಶಕ ಔಷಧಿ ಸಿಂಪರಣೆ ಮಾಡುವುದಿಲ್ಲ. ನೀರು ಕೂಡಾ ಹೆಚ್ಚು ಹಾಯಿಸುವುದಿಲ್ಲ. ಇಬ್ಬನಿ ಹಾಗೂ ತಂಪಾದ ಗಾಳಿಯ ತೇವಾಂಶದಿಂದ ಬೆಳೆಯುತ್ತದೆ. ನಿರೀಕ್ಷಿದಷ್ಟು ಧಾರಣಿ ಸಿಗದಿದ್ದರೂ ನಮಗೆ ಊಟ ಹಾಗೂ ಜಾನುವಾರುಗಳಿಗೆ ಮೇವಿನ ಬರ ನೀಗಿಸುತ್ತದೆ’ ಎನ್ನುತ್ತಾರೆ ಬಿಳಿಜೋಳ ಬಿತ್ತನೆ ಮಾಡಿದ ರೈತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.