ADVERTISEMENT

ಮಹಿಳೆಯರೇ ನಡೆಸುತ್ತಿರುವ ಹೋಟೆಲ್‌

ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಸಂಘಟನೆಯಿಂದ ಸ್ವ ಉದ್ಯಮ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 10:18 IST
Last Updated 8 ಮಾರ್ಚ್ 2020, 10:18 IST
ಯಾದಗಿರಿಯ ತಾಲ್ಲೂಕು ಪಂಚಾಯಿತಿ ರಸ್ತೆಯಲ್ಲಿರುವ ಸ್ತ್ರೀ ಶಕ್ತಿ ಒಕ್ಕೂಟದ ಮಹಿಳೆಯರೇ ತೆರೆದಿರುವ ಹೋಟೆಲ್‌
ಯಾದಗಿರಿಯ ತಾಲ್ಲೂಕು ಪಂಚಾಯಿತಿ ರಸ್ತೆಯಲ್ಲಿರುವ ಸ್ತ್ರೀ ಶಕ್ತಿ ಒಕ್ಕೂಟದ ಮಹಿಳೆಯರೇ ತೆರೆದಿರುವ ಹೋಟೆಲ್‌   

ಯಾದಗಿರಿ: ಈ ಹೋಟೆಲ್‌ನಲ್ಲಿ ಮಾಲೀಕರಿಂದ ಹಿಡಿದು ಎಲ್ಲರೂ ಮಹಿಳೆಯರೇ ಇದ್ದಾರೆ.ಕಳೆದ ಎರಡು ವರ್ಷಗಳಿಂದ ಹೋಟೆಲ್‌ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ.

ನಗರದ ತಾಲ್ಲೂಕು ಪಂಚಾಯಿತಿ ಬಳಿ ಇರುವ ಸ್ತ್ರೀ ಶಕ್ತಿ ಒಕ್ಕೂಟ ಸಂಘಟನೆಯಿಂದ 4 ಜನ ಮಹಿಳೆಯರೇ ಇದನ್ನು ನಿಭಾಯಿಸುತ್ತಿದ್ದಾರೆ. ಸಂಘದಲ್ಲಿ 10 ಜನ ಸದಸ್ಯೆಯರು ಇದ್ದಾರೆ.

ನಾಲ್ಕು ಜನ ಕೆಲಸವನ್ನು ಸಮಾನವಾಗಿ ಹಂಚಿಕೊಂಡು ಮಾಡುತ್ತಿದ್ದಾರೆ. ಅಡುಗೆ, ರೊಟ್ಟಿ, ಪಲ್ಯ,ಬಡಿಸುವುದು, ಸ್ವಚ್ಛತೆಮಾಡುವುದು ಸೇರಿದಂತೆಗ್ರಾಹಕರಿಗೆ ರುಚಿಯಾದ ಊಟ ಬಡಿಸುತ್ತಿದ್ದಾರೆ.

ADVERTISEMENT

ಸರ್ಕಾರದಿಂದ ₹10 ಲಕ್ಷ ಸಾಲ ತೆಗೆದುಕೊಂಡಿದ್ದಾರೆ. ಅದರಲ್ಲಿ ₹6 ಲಕ್ಷ ಕೊಟ್ಟು ಆಟೊ ಖರೀದಿಸಿದ್ದಾರೆ. ಇನ್ನುಳಿದ ಹಣದಲ್ಲಿ ಅಡುಗೆ ಸಮಾನು, ದವಸ, ಧಾನ್ಯ ಖರೀದಿಸಿದ್ದಾರೆ. ಉಳಿದ ಹಣವನ್ನು ಮತ್ತೆ ಸರ್ಕಾರಕ್ಕೆ ಮರಳಿಸಿದ್ದಾರೆ. ಇರುವ ಹಣದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ₹50ಕ್ಕೆ 2 ಜೋಳದ ರೊಟ್ಟಿ ಅಥವಾ ಚಪಾತಿ, ಎರಡು ರೀತಿಯ ಪಲ್ಯ, ಅನ್ನ, ಸಂಬಾರು, ಶೇಂಗಾ ಹಿಂಡಿ ಕೊಡುತ್ತಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳಿಗೆ ಊಟ ಇಲ್ಲಿಂದಲೇ

ನಗರದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು, ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮ ಮಾಡಿದರೆ ಇವರಿಗೆ ಊಟ ತಯಾರಿಸಲು ಕರೆ ಬರುತ್ತದೆ. ರುಚಿ, ಶುಚಿ ಕಾಪಾಡಿಕೊಳ್ಳುವದರಿಂದ ತಮಗೆ ಊಟದ ಆರ್ಡರ್‌ ನೀಡುತ್ತಾರೆ ಎನ್ನುತ್ತಾರೆ ಸಂಘದ ಸದಸ್ಯರು.

‘ಒಂದೂವರೆ ವರ್ಷದ ಹಿಂದೆ ‘ಸವಿರುಚಿ’ ಎನ್ನುವ ಹೆಸರಿನಲ್ಲಿ ವಿವಿಧ ಬಗೆಯ ಆಹಾರ ತಯಾರಿಸಿ ಆಟೊ ಮೂಲಕ ಮಿನಿ ವಿಧಾನಸೌಧ, ತಹಶೀಲ್ದಾರ್‌ ಕಚೇರಿ ಸೇರಿದಂತೆ ವಿವಿಧ ಕಡೆ ಸಂಚರಿಸುತ್ತಿದ್ದರು. ಆಟೊ ಚಾಲಕರಿಗೆ ದಿನಕ್ಕೆ ₹500 ನೀಡಬೇಕಾಗಿದ್ದರಿಂದ 5 ತಿಂಗಳಿಂದ ಇದನ್ನು ನಿಲ್ಲಿಸಿದ್ದೇವೆ’ ಎನ್ನುತ್ತಾರೆ ಸಂಘದ ಅಧ್ಯಕ್ಷರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.