ADVERTISEMENT

ಅಬ್ಬೆತುಮಕೂರು ಪಾದಗಟ್ಟೆ ತಲುಪಿದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 16:00 IST
Last Updated 16 ಆಗಸ್ಟ್ 2023, 16:00 IST
ಗಂವ್ಹಾರದಿಂದ ಆರಂಭವಾದ ಪರಂಪರಾ ಪಾದಯಾತ್ರೆ ಬುಧವಾರ ಅಬ್ಬೆತುಮಕೂರು ಪಾದಗಟ್ಟೆ ತಲುಪಿತು
ಗಂವ್ಹಾರದಿಂದ ಆರಂಭವಾದ ಪರಂಪರಾ ಪಾದಯಾತ್ರೆ ಬುಧವಾರ ಅಬ್ಬೆತುಮಕೂರು ಪಾದಗಟ್ಟೆ ತಲುಪಿತು   

ಯಾದಗಿರಿ: ಕಳೆದ ಮೂರು ದಿನಗಳ ಹಿಂದೆ ಸಿದ್ದಿ ಪುರುಷ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಆರಂಭವಾದ ಪರಂಪರಾ ಪಾದಯಾತ್ರೆಯು ಬುಧವಾರ ಅಬ್ಬೆತುಮಕೂರು ಪಾದಗಟ್ಟೆ ತಲುಪಿದೆ ಎಂದು ಮಠದ ವಕ್ತಾರ ಪ್ರೊ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಬುಧವಾರ ಅಮಾವಾಸ್ಯೆಯ ವಿಶೇಷ ಪೂಜಾ ವಿಧಾನಗಳನ್ನು ಪಲ್ಲಕ್ಕಿ ಮೂರ್ತಿ ಗಂಗಾಸ್ನಾನ ನೆರವೇರಿಸಿಕೊಂಡು ತರುವಾಯ ಹೋತಪೇಟೆಯ ಮಲ್ಲರೆಡ್ಡಿಗೌಡ, ಶಹಾಪುರದ ಮರೆಪ್ಪ ಹೈಯ್ಯಾಳಕರ್ ಏರ್ಪಡಿಸಿದ್ದ ಪ್ರಸಾದವನ್ನು ಸ್ವೀಕರಿಸಿ ಪಾದಯಾತ್ರೆಯು ಠಾಣಗುಂದಿ ತಲುಪಿತು.

ಠಾಣಗುಂದಿ ಗ್ರಾಮದಲ್ಲಿ ಗ್ರಾಮಸ್ಥರು ಏರ್ಪಡಿಸಿದ ಪ್ರಸಾದ ಸ್ವೀಕರಿಸಿ ಸಂಜೆ ಅಬ್ಬೆತುಮಕೂರು ವಿಶ್ವಾರಾಧ್ಯರ ಪಾದಗಟ್ಟೆ ತಲುಪಿತು. ಅಲ್ಲಿಪುರ ಗ್ರಾಮದ ಹಾಗೂ ವಿವಿಧ ಭಕ್ತರಿಂದ ಪ್ರಸಾದ ಫಲಾಹಾರದ ವ್ಯವಸ್ಥೆ ಜರುಗಿತು.

ADVERTISEMENT

ಸಂಜೆ 6 ಗಂಟೆಗೆ ಭಕ್ತರು ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರು, ರಾಜಕೀಯ ಮುಖಂಡರು, ಸಾಹಿತಿ, ಕಲಾವಿದರು ಪಾದಯಾತ್ರೆಯನ್ನು ಭಕ್ತಿ ಸಡಗರಗಳಿಂದ ಬರಮಾಡಿಕೊಂಡು ಪಾದಗಟ್ಟೆಯಿಂದ ವಿಶ್ವಾರಾಧ್ಯರ ದೇವಸ್ಥಾನದ ವರೆಗೆ ವಿಶೇಷ ಮೆರವಣಿಗೆಯಲ್ಲಿ ಕರೆದೊಯ್ದರು.

ಕರ್ನಾಟಕ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಸಾವಿರಾರು ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶಾಂತಿ, ಸೌಹಾರ್ದತೆಯಿಂದ ನಡೆದ ಭಕ್ತಿಯ ಈ ಪಾದಯಾತ್ರೆಯನ್ನು ಎಲ್ಲರೂ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದರು. ಪಾದಯಾತ್ರೆಯ ಸಂದರ್ಭದಲ್ಲಿ ಸಂಬಂಧ ಪಟ್ಟ ಇಲಾಖೆಯ ಸಿಬ್ಬಂದಿ, ಆರೋಗ್ಯ, ಜೆಸ್ಕಾಂ ಇಲಾಖೆ ಮುಂತಾದವರು ಪಾದಯಾತ್ರೆ ಸಾಂಗೋಪಾಂಗವಾಗಿ ನೆರವೇರಲು ಸಹಕರಿಸಿದರು ಎಂದು ಮಠದ ವಕ್ತಾರ ಪ್ರೊ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಗಂವ್ಹಾರದಿಂದ ಕಳೆದ ಮೂರು ದಿನಗಳಿಂದ ನಡೆದ ಪರಂಪರಾ ಪಾದಯಾತ್ರೆ ಅಬ್ಬೆತುಮಕೂರು ಪಾದಗಟ್ಟೆ ತಲುಪಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.