ADVERTISEMENT

ಎಸಿಬಿ ದಾಳಿ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 3:16 IST
Last Updated 22 ಜುಲೈ 2021, 3:16 IST
ಹುಣಸಗಿ ಪಟ್ಟಣದಲ್ಲಿ ಎಸಿಬಿ ದಾಳಿಯ ಬಳಿಕ ದಾಖಲಾತಿಗಳನ್ನು ಪರಿಶೀಲಿಸಿದ ಅಧಿಕಾರಿಗಳು
ಹುಣಸಗಿ ಪಟ್ಟಣದಲ್ಲಿ ಎಸಿಬಿ ದಾಳಿಯ ಬಳಿಕ ದಾಖಲಾತಿಗಳನ್ನು ಪರಿಶೀಲಿಸಿದ ಅಧಿಕಾರಿಗಳು   

ಹುಣಸಗಿ: ತಾಲ್ಲೂಕಿನ ಬನ್ನೇಟ್ಟಿ ಗ್ರಾಮದ ಹೊಲದ ಸರ್ವೆ ಮಾಡಿ, ಹದ್ದುಬಸ್ತ್, ನಕಾಶೆ ಮಾಡಿಕೊಡಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹುಣಸಗಿ ತಾಲ್ಲೂಕಿನ ಬನ್ನೆಟ್ಟಿ ಗ್ರಾಮದ ರೈತ ಮಹಾದೇವಪ್ಪ ಬಡಿಗೇರ ಅವರ ಜಮೀನಿನ ಸರ್ವೆ ಹಾಗೂ ಹದ್ದುಬಸ್ತ್, ನಕಾಶೆ ಮಾಡಿಕೊಡಲು ಸರ್ವೆಯರ್ ರವಿಕುಮಾರ ₹3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ₹2.50 ಲಕ್ಷ ನೀಡುವುದಾಗಿ ಮಹಾದೇವಪ್ಪ ಒಪ್ಪಿದ್ದರು.

ಬುಧವಾರ ಕಕ್ಕೇರಿ ಕ್ರಾಸ್ ಬಳಿ ಸರ್ವೆಯರ್ ತಿಳಿಸಿದ ವ್ಯಕ್ತಿ ನಾಗೇಶರಾವ ತಿರುಪತಿ ಅವರಿಗೆ ಮಹಾದೇವಪ್ಪ ಅವರು ಹಣ ಕೊಡುತ್ತಿದ್ದ ಸಂದರ್ಭದಲ್ಲಿ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸರ್ವೆಯರ್ ರವಿಕುಮಾರ ಹಾಗೂನಾಗೇಶರಾವ ತಿರುಪತಿ ಅವರನ್ನು ಹಣದ ಸಮೇತ ಬಂಧಿಸಲಾಗಿದೆ.

ADVERTISEMENT

2019ರ ಜುಲೈನಲ್ಲಿ ಸರ್ವೆಗಾಗಿ ಅರ್ಜಿ ಸಲ್ಲಿಸಿದ್ದಾಗಿ ದೂರುದಾರ ಮಹಾದೇವಪ್ಪ ತಿಳಿಸಿದ್ದಾರೆ.

ಎಸಿಬಿ ಎಸ್ಪಿ ಮಹೇಶ ಮೇಘಣ್ಣವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಯಾದಗಿರಿ ಡಿವೈಎಸ್‌ಪಿ ಉಮಾಶಂಕರ, ತನಿಖಾಧಿಕಾರಿಗಳಾದ ಬಾಬಾ ಸಾಹೇಬ ಪಟೇಲ, ಗುರುಪಾದ ಬಿರಾದಾರ, ರಾಘವೇಂದ್ರ, ನಿರಂಜನ ಪಾಟೀಲ ಹಾಗೂ ಸಿಬ್ಬಂದಿ ವಿಜಯಕುಮಾರ, ಮರೆಪ್ಪ, ಅಮರನಾಥ, ಗುತ್ತಪ್ಪಗೌಡ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.