ADVERTISEMENT

ರಾಜಕೀಯ ಸ್ಥಾನಕ್ಕೆ ಅಹಿಂದ ಒಗ್ಗಟ್ಟು ಅಗತ್ಯ; ಮೌಲಾಲಿ ಅನಪೂರ

​ಪ್ರಜಾವಾಣಿ ವಾರ್ತೆ
Published 31 ಮೇ 2022, 3:46 IST
Last Updated 31 ಮೇ 2022, 3:46 IST
ವಡಗೇರಾದಲ್ಲಿ ಸೋಮವಾರ ನಡೆದ ಅಹಿಂದ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕಾತಿಯ ಪೂರ್ವಭಾವಿ ಸಭೆಯಲ್ಲಿ ಅಹಿಂದ ಜಿಲ್ಲಾಧ್ಯಕ್ಷ ಮೌಲಾಲಿ ಅನಪೂರ ಮಾತನಾಡಿದರು
ವಡಗೇರಾದಲ್ಲಿ ಸೋಮವಾರ ನಡೆದ ಅಹಿಂದ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕಾತಿಯ ಪೂರ್ವಭಾವಿ ಸಭೆಯಲ್ಲಿ ಅಹಿಂದ ಜಿಲ್ಲಾಧ್ಯಕ್ಷ ಮೌಲಾಲಿ ಅನಪೂರ ಮಾತನಾಡಿದರು   

ವಡಗೇರಾ: ಜಾತಿ, ಧರ್ಮ, ಸಮುದಾಯ ಹಾಗೂ ಪಕ್ಷ ಬೇಧ ಮರೆತು ಎಲ್ಲರೂ ಒಗ್ಗೂಡಿ ಮುಂಬರುವ ಚುನಾವಣೆಯಲ್ಲಿ ಅಹಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಅಹಿಂದ ಜಿಲ್ಲಾಧ್ಯಕ್ಷ ಮೌಲಾಲಿ ಅನಪೂರ ಮನವಿ ಮಾಡಿದರು.

ಪಟ್ಟಣದ ಸೋಮವಾರ ನಡೆದ ಅಹಿಂದ ತಾಲ್ಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕಾತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಯಾದಗಿರಿ ಮತಕ್ಷೇತ್ರದಲ್ಲಿ ಕೋಲಿ, ಕಬ್ಬಲಿಗ, ಕುರುಬ, ನಾಯಕ, ಮುಸ್ಲಿಂ, ಕುಂಬಾರ, ಪರಿಶಿಷ್ಟ ಜಾತಿ, ಗೊಂದಳಿ, ಬೈಲಪತ್ತಾರ, ಘೀಸಾಡಿ, ಜೋಗಿ, ಯಾದವ, ಶಿಳ್ಳೆಕ್ಯಾತ, ಮಡಿವಾಳ, ಸವಿತಾ ಸಮಾಜದವರು ಒಗ್ಗೂಡಿ ಅಹಿಂದ ಅಭ್ಯರ್ಥಿಯನ್ನು ಗೆಲ್ಲಿಸಿ ತರಲು ಮುಂದಾಗಬೇಕು ಎಂದರು.

ADVERTISEMENT

ಅಹಿಂದ ಮುಖಂಡ ಡಾ.ಭೀಮಣ್ಣ ಮೇಟಿ ಮಾತನಾಡಿ, ದೊಡ್ಡ ಸಮುದಾಯಗಳು ಸಣ್ಣ ಸಮುದಾಯಗಳ ಜನರನ್ನು ಕಡೆಗಣಿಸುತ್ತಿವೆ. ಇದರಿಂದ ಸರ್ಕಾರದ ಯೋಜನೆಗಳು ಚಿಕ್ಕ ಸಮುದಾಯಗಳಿಗೆ ತಲುಪುತ್ತಿಲ್ಲ. ರಾಜಕೀಯದಲ್ಲಿ ಈ ಭಾಗದ ಅಹಿಂದ ಶಾಸಕರು ಇಲ್ಲದಿರುವದು ತಪ್ಪಿಸಬೇಕು ಎಂದು ಹೇಳಿದರು.

ಹನುಮೇಗೌಡ ಬೀರನಕಲ್ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ ಅವರ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಬಾಷುಮೀಯಾ ನಾಯ್ಕೋಡಿ, ಎ.ಸಿ.ಕಾಡ್ಲೂರು, ಅಯ್ಯಣ್ಣ ಕನ್ಯಾಕೌಳೂರು, ವಿಜಯ ಕುಮಾರ ಶಿರಗೋಳ, ಶರಣು ನಾಟೇಕಾರ, ಮಲ್ಲಯ್ಯ ಮುಸ್ತಾಜೀರ, ಶರಣಪ್ಪ ಜಂಬೆ ಕುರಕುಂದಾ, ಹಣಮಂತ್ರಾಯಗೌಡ ತೇಕರಾಳ, ಯಂಕಪ್ಪ ರಾಠೋಡ, ದೇವಪ್ಪ ಕಡೇಚೂರು, ಅಯ್ಯಪ್ಪ ಬೆಂಡೆಬೆಂಬಳಿ, ಜಮಾಲ ಕೋಡಾಲ, ಮಲ್ಲು ಶಿವಪೂರು, ಸಾಬಯ್ಯ ಗುತ್ತೇದಾರ, ರಂಗನಾಥ, ನಾಗಪ್ಪ ಬೀರನಕಲ್, ಶಿವಕುಮಾರ ಪೂಜಾರಿ, ಅಬ್ದುಲ್ ಖತಾಲಿ, ನಿಂಗಣ್ಣ ಜಡಿ, ತಿಮ್ಮಣ್ಣ ಬುಸ್ಸೇನಿ, ಫಕೀರ ಅಹಮದ್ ಮರಡಿ, ಗುರುನಾಥ ನಾಟೇಕಾರ, ದೇವು ಬುಸ್ಸೆನಿ, ಬೆಂಜಮೀನ್, ದೇವು ಜಡಿ, ಮಂಜು ಕೋನಹಳ್ಳಿ, ಶಿವಲಿಂಗಪ್ಪ ಪಿಡ್ಡೆಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.