ಹುಣಸಗಿ: ‘ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದರೆ ನೆಮ್ಮದಿಯ ಜೀವನ ಇರುತ್ತದೆ. ದೈವಿಶಕ್ತಿ ಸದಾ ಜಾಗೃತವಾಗಿರುತ್ತದೆ’ ಎಂದು ಹುಣಸಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ ತೀರ್ಥರು ಹೇಳಿದರು.
ಹುಣಸಗಿ ಸಮೀಪದ ಬಿಳೇಬಾವಿ ಗ್ರಾಮದಲ್ಲಿ ಅಕ್ಷೊಭ್ಯತೀರ್ಥರ 214 ನೇ ಆರಾಧಾನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಧ್ಯಾರಾಧನೆ ಅಂಗವಾಗಿ ವೃಂದಾವನಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
‘ನಾವು ನಿತ್ಯದಲ್ಲಿ ಕೈಗೊಳ್ಳುವ ಆಚಾರ, ವಿಚಾರ, ಧಾರ್ಮಿಕ ಕಾರ್ಯಗಳು ಸದಾ ಮನೆಯ ಸದಸ್ಯರಿಗೂ ಉತ್ತಮ ಮಾರ್ಗ ತೊರಿಸುತ್ತದೆ’ ಎಂದರು.
ಯರಗಲ್ಲದ ರಾಮರಾವ್ ಕುಲಕರ್ಣಿ ಉಪನ್ಯಾಸ ನೀಡಿ, ‘ಭಗವಂತ ಸಾಮಿಪ್ಯಕ್ಕೆ ಹೋಗಲು ಗುರು ಕರುಣೆ ಬೇಕು. ಆದ್ದರಿಂದ ಗುರುಗಳ ಸೇವೆ ಹಾಗೂ ಧರ್ಮ ಕಾರ್ಯದಲ್ಲಿ ನಮ್ಮನ್ನು ನಾವು ತೋಡಗಿಸಿಕೊಳ್ಳಬೇಕು’ ಎಂದರು.
ಅರುಣ ದೇಸಾಯಿ ಮಾತನಾಡಿ, ‘ಮನೆಯಲ್ಲಿರುವ ಹಿರಿಯರು ಹಾಗೂ ತಂದೆ–ತಾಯಿರಿಗೆ ಗೌರವಿಸುವ ಮೂಲಕ ಅವರ ಆರೈಕೆಯಲ್ಲಿ ದೇವರ ರೂಪವನ್ನು ಕಂಡಾಗ ಮಾತ್ರ ಮನೆಯ ವಾತಾವರಣವೂ ಚನ್ನಾಗಿರುತ್ತದೆ’ ಎಂದು ತಿಳಿಸಿದರು.
ಆರಾಧನೆ ಅಂಗವಾಗಿ ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ನಿರ್ಮಾಲ್ಯ ಸೇವೆ, ಬಳಿಕ ಯತಿಳ ವೃಂದಾನವಗಳಿಗೆ ಅಲಂಕಾಲ, ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಯಿತು.
ಯಲಗೂರಾಚಾರ್ಯ ಜೋಶಿ, ಗಂಗಾಧರ ಜೋಶಿ ಅವರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಗಾಯತ್ರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಆರಾಧನೆಯಲ್ಲಿ ಕೃಷ್ಣಾಚಾರ ಗುಡಗುಂಟಿ, ಭೀಮಶೇನರಾವ್ ಹೇಗಡ್ಯಾಳ, ಗಂಗಾಧರ ಜೂಲಗುಡ್ಡ, ದತ್ತಾತ್ರೇಯ ನಾರಾಯಣಪುರ, ರವಿ ಜೋಶಿ, ವಿಲಾಸ್, ಮಲ್ಲಾರಾವ್, ರವಿಂದ್ರ, ಅಶೋಕ, ಶ್ರೀಹರಿ, ಭೀಮರಾವ್ ಕುಲಕರ್ಣಿ, ಅಶೋಕ ಮೈಲೇಶ್ವರ, ದತ್ತಾತ್ರೇಯ ಜಹಗಿರದಾರ, ಸದಾಶಿವ ನಾರಾಯಣಪುರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.