ADVERTISEMENT

ಮಹಾಸಭೆಯ ಬಲವರ್ಧನೆಗೆ ಶ್ರಮಿಸಿ: ಸೂಗುರೇಶ ವಾರದ

ಅಖಿಲ ಭಾರತ ವೀರಶೈವ ಮಹಾಸಭಾ ಸಭೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 4:20 IST
Last Updated 25 ಜನವರಿ 2022, 4:20 IST
ಸುರಪುರದ ರಂಗಂಪೇಟೆಯಲ್ಲಿ ಸೋಮವಾರ ಆಯೋಜಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಸಭೆಯನ್ನು ಸೂಗೂರೇಶ ವಾರದ ಉದ್ಘಾಟಿಸಿದರು. ಶಿವರಾಜ ಕಲಿಕೇರಿ, ಜಗದೀಶ ಪಾಟೀಲ, ಚಂದ್ರಶೇಖರ ಡೋಣೂರ ಇದ್ದರು
ಸುರಪುರದ ರಂಗಂಪೇಟೆಯಲ್ಲಿ ಸೋಮವಾರ ಆಯೋಜಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಸಭೆಯನ್ನು ಸೂಗೂರೇಶ ವಾರದ ಉದ್ಘಾಟಿಸಿದರು. ಶಿವರಾಜ ಕಲಿಕೇರಿ, ಜಗದೀಶ ಪಾಟೀಲ, ಚಂದ್ರಶೇಖರ ಡೋಣೂರ ಇದ್ದರು   

ಸುರಪುರ: ‘ತಾಲ್ಲೂಕಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಬಲ ವರ್ಧನೆಗೊಳಿಸುವುದು ಅಗತ್ಯ ವಾಗಿದೆ’ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಹೇಳಿದರು.

ರಂಗಂಪೇಟೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನಗರ ಹಾಗೂ ತಾಲ್ಲೂಕ ಯುವ ಘಟಕದಿಂದ ಸೋಮವಾರ ಆಯೋಜಿಸಿದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಸಭೆಯಯನ್ನು ಬಲಿ ಷ್ಠಗೊಳಿಸಲು ಮುಖಂಡರು ಸದಸ್ಯತ್ವ ಅಭಿಯಾನ ಆರಂಭಿಸಬೇಕು. ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ ಗ್ರಾಮೀಣ ಶಾಖೆಗಳನ್ನು ಆರಂಭಿಸಿ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಶಿವರಾಜ ಕಲಿಕೇರಿ ಮಾತನಾಡಿ, ‘ಶೀಘ್ರದಲ್ಲೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಸಲಾಗುವುದು. ಆ ಮೂಲಕ ಸಮಾಜದ ಸಂಘಟನೆ ಗಾಗಿ ದುಡಿದ ಹಿರಿಯರನ್ನು ಗೌರವಿಸಲಾಗುವುದು’ ಎಂದು ಹೇಳಿದರು.

ಜಗದೀಶ ಪಾಟೀಲ ಸೂಗುರು, ಚಂದ್ರಶೇಖರ ಡೋಣುರು, ವೀರೇಶ ಪಂಚಾಂಗಮಠ, ಮಲ್ಲಿಕಾರ್ಜುನರಡ್ಡಿ ಅಮ್ಮಾಪೂರ, ಸಿದ್ದನಗೌಡ ಹೆಬ್ಬಾಳ, ಚನ್ನಾರಡ್ಡಿ ದೇಸಾಯಿ, ಸೂಗುರೇಶ ಸಜ್ಜನ್, ಆನಂದ ಕುಂಬಾರ, ಅಜಯಕುಮಾರ ಪಾಟೀಲ, ಸ್ವರೂಪ ಬೂದಿಹಾಳ, ಸುಪ್ರೀತ್ ಜಾಕಾ, ಅಜಯ ಶೆಳ್ಳಗಿ, ಉದಯ ಗುಳಗಿ, ಮಲ್ಲು ಪಾಟೀಲ ಬಿಜಾಸಪುರ ಮತ್ತು ಪ್ರಮುಖರು ಇದ್ದರು.

ಅಶೋಕ ಹೈಯಾಳ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.