ADVERTISEMENT

ನವ ರಾಷ್ಟ್ರ ನಿರ್ಮಾಣಕ್ಕೆ ಅವಿರತ ಶ್ರಮ: ಅಶೋಕ ಸುರಪುರಕರ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 4:13 IST
Last Updated 15 ಏಪ್ರಿಲ್ 2022, 4:13 IST
ಹುಣಸಗಿಯ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಹುಣಸಗಿಯ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳ ಸರ್ಕಾರಿ ಕಚೇರಿ, ಸಂಘ ಸಂಸ್ಥೆ, ಶೈಕ್ಷಣಿಕ ಕೇಂದ್ರಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಶೋಕ ಸುರಪು ರಕರ್ ಮಾತನಾಡಿ, ಅಂಬೇಡ್ಕರ್ ಅವರು ಹಿಂದುಳಿದವರ ಏಳಿಗೆಗಾಗಿ ತಮ್ಮ ಜೀವನವವನ್ನೇ ಹೋರಾಟವಾಗಿಸಿಕೊಂಡರು.‌ ಸಂವಿಧಾನ ರಚಿಸುವ ಮೂಲಕ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆ ಮೂಲಕ ನವ ಭಾರತದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.

ಖಜಾನಾಧಿಕಾರಿ ಸಣ್ಣಕ್ಕೆಪ್ಪ ಕೊಂಡೇಕಾರ್ ಮಾತನಾಡಿ, ಅಂಬೇಡ್ಕರ್ ಶೋಷಿತರ ಶಕ್ತಿಯಾಗಿದ್ದರು. ಎಲ್ಲ ಜನಾಂಗದವರಿಗೆ ನ್ಯಾಯಸಮ್ಮತವಾದ ಮೀಸಲಾತಿ ಕಲ್ಪಿಸಿಕೊಟ್ಟರುಎಂದರು.

ADVERTISEMENT

ಮುಖ್ಯಮಂತ್ರಿ ಪದಕ ಪಡೆದ ಸಿಪಿಐ ಎನ್.ಕೆದೌಲತ್, ಕಸಾಪ ನೂತನ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಪತ್ರಕರ್ತರಾದ ರಾಘವೇಂದ್ರ ಕಾಮನಟಗಿ, ಬಾಲಪ್ಪ ಕುಪ್ಪಿ, ಬಸವರಾಜ ಕಟ್ಟಿಮನಿ, ಶಿವಶರಣ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು.

ಗ್ರೇಡ್-2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ, ಪ್ರವೀಣ ಸಜ್ಜನ್, ಪ್ರಕಾಶ ಪಾಟೀಲ, ವೆಂಕಟೇಶ, ಮಲ್ಲಪ್ಪ ಕಟ್ಟಿಮನಿ, ಶಿವಪ್ಪ ಸದಬ, ಭೀಮಣ್ಣ ನಾಟೀಕರ, ಅಂಬ್ಲಪ್ಪ ಹಳ್ಳಿ ಇದ್ದರು.

ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್.ಎಂ.ಕಿರಣಗಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು. ವಿಎಸ್‌ಪಿಎಂ ಐಟಿಐ ಕಾಲೇಜು ಪ್ರಾಚಾರ್ಯ ಬಸವರಾಜ ಮರೋಳ, ಶರಣಪ್ಪ ಕಟ್ಟಿಮನಿ ಇದ್ದರು.

ಕಲ್ಲದೇವನಹಳ್ಳಿ: ಕಲ್ಲದೇವನಹಳ್ಳಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜನ್ಮ ದಿನ ಕಾರ್ಯಕ್ರಮದಲ್ಲಿ ಮುಖಂಡ ರಾಮಣ್ಣ ಕಲ್ಲದೇವನಹಳ್ಳಿ, ಪರಮಾನಂದ ಚೆಟ್ಟಿ, ಶರಣಪ್ಪ ಬಡಿಗೇರ, ಮಲ್ಲಪ್ಪ ಬಡಿಗೇರ, ಚಂದ್ರಶೇರ ಗೋಡಿಕಾರ, ಭೀಮರಾಯ ನಾವದಗಿ ಇದ್ದರು.

ವಜ್ಜಲ: ಗ್ರಾಮದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ, ಮುಖಂಡರಾದ ಸಂಗನಗೌಡ ಪೊಲೀಸ್ ಪಾಟೀಲ, ಚಂದ್ರಶೇಖರ ಪಟ್ಟಣಶೆಟ್ಟಿ, ಅಮರೇಶ ಬಸನಗೌಡ್ರ, ಚಂದ್ರಶೇಖರ ಬೋರಮಗುಂಡ, ಶಿವಲಿಂಗಪ್ಪ ಬಜನಿ, ಭೀಮಣ್ಣ ದ್ಯಾಮಗುಂಡ, ಸಂಗಮೇಶ ಸಾಲವಾಡಗಿ, ಶ್ರೀಶೈಲ ದೇವತಕಲ್ಲ, ಮಲ್ಲಿಕಾರ್ಜುನ ದೊಡ್ಡಮನಿ, ಭೀಮಣ್ಣ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.