ADVERTISEMENT

ಹುಣಸಗಿ: ಅಂಬಿಗರ ಚೌಡಯ್ಯನ ವಚನದಲ್ಲಿ ವಾಸ್ತವತೆ:

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 5:16 IST
Last Updated 23 ಜನವರಿ 2026, 5:16 IST
ಹುಣಸಗಿ ತಾಲ್ಲೂಕಿನ ವಜ್ಜಲದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಆಚರಿಸಲಾಯಿತು 
ಹುಣಸಗಿ ತಾಲ್ಲೂಕಿನ ವಜ್ಜಲದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಆಚರಿಸಲಾಯಿತು    

ಹುಣಸಗಿ: ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಗ್ರಾಮದ ಮುಖಂಡರಾದ ಶರಣಗೌಡ ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ‘ಚೌಡಯ್ಯನವರ ವಚನದಲ್ಲಿ ವಸ್ತು ಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ. ವಚನದ ಶಬ್ದಗಳಲ್ಲಿ ಕಠಿಣತೆ ಕಂಡರೂ ಅದನ್ನು ಅರ್ಥ ಸರಿಯಾಗಿ ಮಾಡಿಕೊಂಡಲ್ಲಿ ಸತ್ಯದ ದರ್ಶನವಾಗಲಿದೆ. ತಮ್ಮ ವಚನಗಳ ಮೂಲಕ ಸಮಾಜದ ಪರಿವರ್ತನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಶರಣರ ವಚನಗಳನ್ನು ನಂಬಿ ಬದುಕಿದರೆ ಜೀವನದಲ್ಲಿ ನೆಮ್ಮದಿ ಸಾಧ್ಯ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಶಾಂತಗೌಡ ಪಾಟೀಲ ಮಾತನಾಡಿ, ‘ಶರಣ ತತ್ವದಲ್ಲಿ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಆದ್ಯತೆ ನೀಡಿದ್ದಾರೆ. ಆತ್ಮನನ್ನು ಪರಮಾತ್ಮನೆಡೆಗೆ ಕೊಂಡೊಯ್ಯಲು ವಚನಗಳೇ ದಾರಿ’ ಎಂದು ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಸಂಗನಗೌಡ ಪೊಲೀಸ್‌ ಪಾಟೀಲ, ಮೋಹನರಾವ ಕುಲಕರ್ಣಿ, ಆನಂದ ಪಾಟೀಲ, ಶಿವಲಿಂಗಪ್ಪ ಬಜನಿ, ಚಂದ್ರಶೇಖರ ಬೋರಮಗುಂಡ, ಬಸಣ್ಣ ಯಾಳಗಿ, ವಿರುಪಾಕ್ಷಿ ಬಾಗೇವಾಡಿ, ಪ್ರಕಾಶ ಬಡಿಗೇರ, ಸಂಗು ಕಾಮನಟಗಿ, ಶ್ರೀಶೈಲ ದೇವತಕಲ್ಲ, ಸದಾಶಿವ ಹುಣಸಗಿ, ನಿಂಗಣ್ಣ ಬೋಯಿ, ಮಲ್ಲಿಕಾರ್ಜುನ ದೊಡ್ಡಮನಿ ಸೇರಿದಂತೆ ಇತರರು ಹಾಜರಿದ್ದರು. 

ಹುಣಸಗಿ ತಾಲ್ಲೂಕಿನ ವಜ್ಜಲದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಆಚರಿಸಲಾಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.