ADVERTISEMENT

ಯಾದಗಿರಿ: ಹಾಸ್ಟೆಲ್ ಕಾರ್ಮಿಕರ ಅನಿರ್ದಿಷ್ಟ ಧರಣಿ

ಇಪಿಎಫ್‌, ಇಎಸ್‌ಐ ಸೌಲಭ್ಯಕ್ಕೆ ಆಹೋರಾತ್ರಿ ಹೋರಾಟ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 3:10 IST
Last Updated 5 ಫೆಬ್ರುವರಿ 2021, 3:10 IST
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದಿಂದ ಪ್ರತಿಭಟನೆ ಮಾಡಲಾಯಿತು
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದಿಂದ ಪ್ರತಿಭಟನೆ ಮಾಡಲಾಯಿತು   

ಯಾದಗಿರಿ: 2010ರಿಂದ ಇಪಿಎಫ್‌ ಮತ್ತು ಇಎಸ್‌ಐ ಸೌಲಭ್ಯ ಹಾಗೂ ಬಾಕಿ ವೇತನ ಬಿಡುಗಡೆ ಮತ್ತು ಎಲ್ಲರನ್ನು ಕೆಲಸದಲ್ಲಿ ಮುಂದುವರೆಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ (AIUTUC) ನೇತೃತ್ವದಲ್ಲಿ ಹಾಸ್ಟೆಲ್ ಕಾರ್ಮಿಕರ ಅನಿರ್ದಿಷ್ಟ ಆಹೋರಾತ್ರಿ ಧರಣಿ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರಾರಂಭವಾಯಿತು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರಿಗೆ 5 ತಿಂಗಳು ಹಾಗೂ ಇನ್ನುಳಿದ ಕಾರ್ಮಿಕರಿಗೆ 3 ತಿಂಗಳು ವೇತನ ಬಾಕಿ ಉಳಿದಿದೆ. ಬಿಸಿಎಂ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಮಾರ್ಚ್, ಎಪ್ರಿಲ್, ಮೇ 2020ರ 3 ತಿಂಗಳು ಮತ್ತು ನವೆಂಬರ್-ಡಿಸೆಂಬರ್ 2020 ರ 2 ತಿಂಗಳ ವೇತನ ನೀಡುವಂತೆ ಆಗ್ರಹಿಸಿದರು.

ಬಿಸಿಎಂ ಇಲಾಖೆಯ ಅಧಿಕಾರಿಗಳು ಲಾಕ್‍ಡೌನ್ ಅವಧಿಯ ವೇತನ ಪಾವತಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವೇತನ ಪಾವತಿಯಾಗಿಲ್ಲ. ಸರ್ಕಾರದಿಂದ ಲಾಕ್‍ಡೌನ್ ಅವಧಿಯ ವೇತನ ನೀಡಬೇಕು ಎಂದು ಆದೇಶ ಇದ್ದರೂ ಇದುವರೆಗೂ ಬಿಸಿಎಂ ಸೇರಿದಂತೆ ಸಮಾಜ ಕಲ್ಯಾಣ, ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ವೇತನ ಪಾವತಿ ಮಾಡಿಲ್ಲ ಎಂದು ದೂರಿದರು.

ADVERTISEMENT

ಹಾಸ್ಟೆಲ್ ಕಾರ್ಮಿಕರ ಬಾಕಿ ಇರುವ ವೇತನ ಕೂಡಲೇ ಎಲ್ಲಾ ಹೊರಗುತ್ತಿಗೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಎಲ್ಲಾ ಇಲಾಖೆಗಳಲ್ಲಿ ಈಗಾಗಲೇ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಹೊರಗುತ್ತಿಗೆ ಕಾರ್ಮಿಕರನ್ನು ಅವರವರ ಜಾಗದಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಧರಣಿಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ, ಜಿಲ್ಲಾ ಅಧ್ಯಕ್ಷೆ ಡಿ. ಉಮಾದೇವಿ, ರಾಮಲಿಂಗಪ್ಪ ಬಿ.ಎನ್, ತಾಜುದ್ದೀನ್, ಗಜಾನನ, ಭೀಮಾಶಂಕರ, ಶ್ರೀಕಾಂತ್, ಮಾಪಣ್ಣ, ಮಲ್ಲಪ್ಪ, ಜಗದೇವಿ, ನಾಗಮ್ಮ, ಶಾಮಬಾಯಿ, ರೇಣುಕಾ, ಮರೆಮ್ಮ, ಯಲ್ಲಮ್ಮ ಸೇರಿದಂತೆ ಹಾಸ್ಟೆಲ್‌ ಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.