ADVERTISEMENT

ಸಂಘ–ಸಂಸ್ಥೆಗಳಿಂದ ಅನ್ನದಾಸೋಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 16:21 IST
Last Updated 3 ಏಪ್ರಿಲ್ 2020, 16:21 IST
ಜಯ ಕರ್ನಾಟಕ ಸಂಘಟನೆ ಹಾಗೂ ನವನಂದಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ 4ನೇ ದಿನವಾದ ಶುಕ್ರವಾರ ಆಹಾರ, ನೀರು ವಿತರಿಸಲಾಯಿತು
ಜಯ ಕರ್ನಾಟಕ ಸಂಘಟನೆ ಹಾಗೂ ನವನಂದಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ 4ನೇ ದಿನವಾದ ಶುಕ್ರವಾರ ಆಹಾರ, ನೀರು ವಿತರಿಸಲಾಯಿತು   

ಯಾದಗಿರಿ: ಕೊರೊನಾ ವೈರಸ್ ಭೀತಿಯಿಂದ ಮರಳಿ ಹಳ್ಳಿಗಳಿಗೆ ವಾಪಸಾಗುತ್ತಿರುವ ಜನತೆಗೆ, ನಿರ್ಗತಿಕರಿಗೆ, ಅಗತ್ಯ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಜಯ ಕರ್ನಾಟಕ ಸಂಘಟನೆ ಹಾಗೂ ನವನಂದಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ 4ನೇ ದಿನವಾದ ಶುಕ್ರವಾರ ಆಹಾರ ನೀರು, ವಿತರಿಸಲಾಯಿತು.

ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಶ್ವನಾಥ ನಾಯಕ,ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ ಮೊಗದಂಪುರ, ರಮೇಶ ಗುಮಟೆ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮನೋಹರ ಕೆ.ಪವಾರ, ಡಾ. ಸಾಜಿದ್, ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೇರಿ, ಕಿಟ್ಟು ನಾಯಕ, ದೇವೀಂದ್ರ ನಾಯಕ, ಹರ್ಷ ದೇಶಪಾಂಡೆ, ಹಣಮಂತ ಪೂಜಾರಿ, ನರೇಶ ಕೆ. ಹೊಸಳ್ಳಿ, ಶರಣಕುಮಾರ, ಸಾಬರೆಡ್ಡಿ, ದಶರಥ, ಸಾಬರೆಡ್ಡಿ, ಸುಭಾಷ ಗೌಡ ನಾಯ್ಕಲ್, ಶರಣು ಯಲ್ಹೇರಿ, ದೇವು ಇದ್ದರು.

ಶಿವಾಜಿ ಸೇನೆಯಿಂದ ಆಹಾರ ವಿತರಣೆ:ಹಿಂದು ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯಸ್ಮರಣೋತ್ಸವದ ದಿನ ತಾಲ್ಲೂಕಿನ ವರ್ಕನಳ್ಳಿ ಗ್ರಾಮದ ಹೊರವಲಯದಲ್ಲಿರುವ ಅಲೆಮಾರಿ ನಿರಾಶ್ರಿತರಿಗೆ ಅಖಿಲ ಕರ್ನಾಟಕ ಹಿಂದು ಸಾಮ್ರಾಟ್ ಶಿವಾಜಿ ಸೇನಾ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಶೇಗುರಕರ್‌ ನೇತೃತ್ವದಲ್ಲಿ ಶುಕ್ರವಾರ ಸತತ ಆರನೇ ದಿನ ಅನ್ನ ಸಂತರ್ಪಣೆ ಜರುಗಿತು.

ADVERTISEMENT

ಮಡಿವಾಳಪ್ಪ ಪೊಲೀಸ್, ವೆಂಕಟೇಶ, ಹುಸೇನಪ್ಪ, ಅಂಬರೇಶ, ಖತಾಲಪ್ಪ, ಗಂಗಪ್ಪ ಚಿಂತನಳ್ಳಿ, ಮಲ್ಲು, ಶಂಕರ ಬಸುನಾಯಕ ಇದ್ದರು.

ಶರಣಗೌಡ ಕಂದಕೂರು ಅಭಿಮಾನಿಗಳು:ನಗರದ ಜೀವನ ಜ್ಯೋತಿ (ಕುಷ್ಠರೋಗಿ) ಕಾಲೋನಿ ಸೇರಿದಂತೆ ವಿವಿಧೆಡೆ ಯುವ ನಾಯಕ ಶರಣಗೌಡ ಕಂದಕೂರು ಅಭಿಮಾನಿ ಬಳಗದ ವತಿಯಿಂದ ನಿರ್ಗತಿಕರು, ಭಿಕ್ಷುಕರು, ಅನಾಥರಿಗೆ, ಕುಷ್ಠರೋಗಿಗಳಿಗೆ ವಿವಿಧ ಹಣ್ಣುಗಳು ಹಾಗೂ ಶುದ್ಧ ಕುಡಿವ ನೀರು ವಿತರಿಸಲಾಯಿತು.

ಯುವ ಮುಖಂಡ ಮಲ್ಲು ಮಾಳಿಕೇರಿ ನೇತೃತ್ವದಲ್ಲಿ ವಿತರಣೆ ಕಾರ್ಯ ಜರುಗಿತು. ದೀಪಕ್ ಒಡೆಯರ್, ಮಿರಾನ್ ಬದ್ದೇಪಲ್ಲಿ, ಪ್ರಬು ಯಡ್ಡಳ್ಳಿ, ಸುಮಂತ ಯಡ್ಡಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.