ADVERTISEMENT

ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸಿ: ಡಾ.ಲಕ್ಷ್ಮೀಕಾಂತ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:44 IST
Last Updated 27 ನವೆಂಬರ್ 2022, 2:44 IST
ಯಾದಗಿರಿ ನಗರದ ಆರ್ಯಭಟ್ಟ ಇಂಟರನ್ಯಾಶನಲ್ ಅಕಾಡೆಮಿ ಶಾಲೆಯ 5ನೇ ಸಂಸ್ಥಾಪನಾ ದಿನದ ವಸ್ತು ಪ್ರದರ್ಶನಕ್ಕೆ ಗಣ್ಯರು ಚಾಲನೆ ನೀಡಿದರು
ಯಾದಗಿರಿ ನಗರದ ಆರ್ಯಭಟ್ಟ ಇಂಟರನ್ಯಾಶನಲ್ ಅಕಾಡೆಮಿ ಶಾಲೆಯ 5ನೇ ಸಂಸ್ಥಾಪನಾ ದಿನದ ವಸ್ತು ಪ್ರದರ್ಶನಕ್ಕೆ ಗಣ್ಯರು ಚಾಲನೆ ನೀಡಿದರು   

ಯಾದಗಿರಿ: ‘ಪ್ರತಿಯೊಂದೂ ಮಗುವಿನಲ್ಲಿ ಪ್ರಕೃತಿದತ್ತ ಪ್ರತಿಭೆಯಿರುತ್ತದೆ. ಶಿಕ್ಷಕರು ಮತ್ತು ಪೋಷಕರು ಅದನ್ನು ಗುರುತಿಸಿ, ಅವರಲ್ಲಿ ಸಕಾರಾತ್ಮ ಚಿಂತನೆ, ಭರವಸೆ ಮತ್ತು ಉನ್ನತ ಕನಸುಗಳನ್ನು ಬೆಳೆಸಬೇಕು’ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಲಕ್ಷ್ಮೀಕಾಂತ ಸಲಹೆ ನೀಡಿದರು.

ನಗರದ ಆರ್ಯಭಟ್ಟ ಇಂಟರನ್ಯಾಶನಲ್ ಅಕಾಡೆಮಿ ಶಾಲೆಯ 5ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಸ್ತು ಪ್ರದರ್ಶನದಂತ ಚಟುವಟಿಕೆಗಳಿಂದ ಮಕ್ಕಳಲ್ಲಿನ ಪ್ರತಿಭೆ ಹೊರತರಲು ಸಹಕಾರಿ
ಯಾಗುತ್ತದೆ. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಅವರು ಗುರಿ ತಲುಪಲು ಸಾಧ್ಯ ಎಂದರು.

ಶಾಲೆಯಲ್ಲಿ ಕಮಕ್ಕಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ. ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್ ನೀಡದಂತೆ ಮತ್ತು ಅತಿಯಾದ ಟಿವಿ ವೀಕ್ಷಣೆ ಮಾಡದಂತೆ ಎಚ್ಚರವಹಿಸಿ. ಮೃಧುವಾಗಿ ಸಹನೆಯಿಂದ ವರ್ತಿಸಿದರೆ ಮಕ್ಕಳು ನಮ್ಮ ಮಾತನ್ನು ಪಾಲಿಸುತ್ತಾರೆ.

ADVERTISEMENT

ಶಾಲೆಯಲ್ಲಿನ ಶೈಕ್ಷಣಿಕ ವಿಷಯಗಳನ್ನು ಅವರೊಂದಿಗೆ ಚರ್ಚಿಸುವುದರಿಂದ ಶೈಕ್ಷಣಿಕ ಪ್ರಗತಿ ಉತ್ತಮಗೊಳ್ಳುತ್ತದೆ ಎಂದು ಅವರು
ತಿಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ ಮದ್ನಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲೆ ಪರಿಸರದ ಮಹತ್ವ ತಿಳಿಸಿ. ಉತ್ತಮ ಪರಿಸರದ ನಿರ್ಮಾಣದಿಂದ ಮಕ್ಕಳ ದೈಹಿಕ ಮತ್ತು ಮಾನಸಿಕವಾದ ಬೆಳವಣಿಗೆ ಆರೋಗ್ಯಯುತವಾಗಿರುತ್ತದೆ
ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸುಧಾಕರರೆಡ್ಡಿ ಪಾಟೀಲ ಅನಪುರ, ಪ್ರಾಂಶುಪಾಲ ಪಿ.ಅರವಿಂದಾಕ್ಷಣ, ವೆಂಕಟರೆಡ್ಡಿ ಪಾಟೀಲ ಅನಪುರ, ಅರವಿಂದ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.