ADVERTISEMENT

ಯಾದಗಿರಿ: ಹರಿತವಾದ ಆಯುಧದಿಂದ ವ್ಯಕ್ತಿ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 15:51 IST
Last Updated 14 ಡಿಸೆಂಬರ್ 2024, 15:51 IST
   

ಯಾದಗಿರಿ: ಹರಿತವಾದ ಆಯುಧದಿಂದ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿರುವ ಘಟನೆ ಶನಿವಾರ ಸಂಜೆ ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದ ಬಳಿ ಜರುಗಿದೆ. ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾನೆ.

ಶಹಾಪುರ‌ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಶ್ರೀಶೈಲ್ ಹುಳಂಡಗೇರ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಜನನಿಬಿಡ ಪ್ರದೇಶದಲ್ಲಿ ಘಟನೆ ನಡೆದಿದ್ದು, ಜನತೆ ಹೌರಾರಿದ್ದಾರೆ. ಘಟನೆ ನಂತರ ಸಾರ್ವಜನಿಕರು ಜಮಾಯಿಸಿದ್ದರು.

ಕುತ್ತಿಗೆ, ಹೊಟ್ಟೆ, ಸೊಂಟಕ್ಕೆ ಹರಿತವಾದ ಆಯುಧದಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಶ್ರೀಶೈಲ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಶ್ರೀಶೈಲ್ ಮೈಮೇಲೆ ಭಾಗ್ಯ, ರೇಣುಕಾ ಎಂದು ಹಚ್ಚೆ ಹಾಕಿಸಿಕೊಂಡಿದ್ದು, ಪಾನಮತ್ತಾಗಿರುವುದು ಕಂಡು ಬಂದಿದೆ.

ADVERTISEMENT

ಶ್ರೀಶೈಲ್ ಮೇಲೆ ದಾಳಿ ಮಾಡಿದವರು ಯಾರು ಹಾಗೂ ಕಾರಣ ತಿಳಿದು ಬಂದಿಲ್ಲ. ತನಿಖೆಯಿಂದ ತಿಳಿದುಬರಲಿದೆ ಎಂದು ಪೊಲೀಸರು ನೀಡುವ ಮಾಹಿತಿಯಾಗಿದೆ.

ಘಟನೆ ತಿಳಿಯುತ್ತಲೇ ಸ್ಥಳಕ್ಕೆ ಎಸ್‌ ಪೃಥ್ವಿಕ್ ಶಂಕರ್, ಡಿವೈಎಸ್‌ಪಿ ಅರೂನಕುಮಾರ, ಸಿಪಿಐ ಸುನೀಲಕುಮಾರ ಮೂಲಿಮನಿ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲಿನೆ ಮಾಡಿದ್ದಾರೆ. ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಗೆ ಕಾರಣರಾದ ದುಷ್ಕರ್ಮಿಗಳ ಬಂಧನಕ್ಕೆ ಜಾಲ ಹೆಣೆಯಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.