ADVERTISEMENT

ವಿನೂತನ ವೇಷ ಧರಿಸಿ ಜಾಗೃತಿ

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆನ್‌ಲೈನ್‌ನಲ್ಲಿ ವಿಶೇಷ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 16:36 IST
Last Updated 12 ಆಗಸ್ಟ್ 2020, 16:36 IST
ಯಾದಗಿರಿಯ ಟ್ವಿಂಕಲ್ ಬೆಲ್ ಹಾಗೂ ಇಂಡಿಯನ್ ಪಬ್ಲಿಕ್ ಸ್ಕೂಲ್ ಮಕ್ಕಳು ವಿನೂತನವಾಗಿ ಕೊರೊನಾ ಜಾಗೃತಿ ಮೂಡಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿದರು
ಯಾದಗಿರಿಯ ಟ್ವಿಂಕಲ್ ಬೆಲ್ ಹಾಗೂ ಇಂಡಿಯನ್ ಪಬ್ಲಿಕ್ ಸ್ಕೂಲ್ ಮಕ್ಕಳು ವಿನೂತನವಾಗಿ ಕೊರೊನಾ ಜಾಗೃತಿ ಮೂಡಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿದರು   

ಯಾದಗಿರಿ:ನಗರದ ಟ್ವಿಂಕಲ್ ಬೆಲ್ ಹಾಗೂ ಇಂಡಿಯನ್ ಪಬ್ಲಿಕ್ ಸ್ಕೂಲ್ ಮಕ್ಕಳು ವಿನೂತನವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಜೊತೆಗೆಕೊರೊನಾ ಜಾಗೃತಿ ಮೂಡಿಸಲು ಕೊರೊನಾ ವಾರಿಯರ್ಸ್‌ಆಗಿ ವೇಷ ಧರಿಸಿ ಗಮನ ಸೆಳೆದಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ ಕುರಿಹಾಳ ಹಾಗೂ ಕಲ್ಯಾಣಿ ಪಾಟೀಲ ಅವರು ಆನ್‌ಲೈನ್ ಮುಖಾಂತರ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆ ಏರ್ಪಡಿಸಿದ್ದರು.

ಶ್ರೀಕೃಷ್ಣ ರಾಧೆಯ ಜೊತೆಗೆ ಕೊರೊನಾ ವಾರಿಯರ್ಸ್‌ಗಳಾದ ವೈದ್ಯರು, ಪೊಲೀಸರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆವಿವಿಧರೀತಿಯ ವೇಷ ಧರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮಕ್ಕಳು ವೇಷ ಧರಿಸಿ, ಆನ್ ಲೈನ್‌ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ಕೃಷ್ಣ ರಾಧೆಯ ವೇಷದಲ್ಲಿ ಮಕ್ಕಳು ಮಾಸ್ಕ್ ಹಾಕಿಕೊಂಡು, ಕೈಯಲ್ಲಿ ಸ್ಯಾನಿಟೈಸರ್ ಹಿಡಿದು ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಆಂಬುಲೆನ್ಸ್ ಚಾಲಕ, ರೋಗಿಗಳ ರೀತಿ ಹಾಗೂ ಚಿಕಿತ್ಸೆ ಕೊಡುವ ಡಾಕ್ಟರ್ ರೀತಿ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.