ಹುಣಸಗಿ: ದೂರದೃಷಿಯ ನಾಯಕ ರಾಗಿದ್ದ ಡಾ. ಬಾಬು ಜಗಜೀವನರಾಂ ಅವರು ತುಳಿತಕ್ಕೆ ಒಳಗಾದವರ ಕ್ಷೇಮಾಭಿವದ್ಧಿಗೆ ಹೋರಾಡಿದ್ದರು. ಅಂಥ ಮಹಾನ್ ನಾಯಕರ ಆದರ್ಶಗಳ ಪಾಲನೆ ನಮ್ಮೆಲ್ಲ ಕರ್ತವ್ಯ ಎಂದು ತಹಶೀಲ್ದಾರ್ ಅಶೋಕಕುಮಾರ ಸುರಪುರಕರ್ ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂ ಅವರ 115ನೇ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ದೇಶದಲ್ಲಿ ತಲೆದೋರಿದ್ದ ಆಹಾರ ಸಮಸ್ಯೆ ಹೋಗಲಾಡಿಸಲು ಹಸಿರು ಕ್ರಾಂತಿ ಆರಂಭಿಸಿದ್ದರು. ಆ ಮೂಲಕ ಭಾರತದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದರು ಎಂದರು.
ಉಪಖಜಾನಾಧಿಕಾರಿ ಸಣ್ಣಕೆಪ್ಪ ಕೊಂಡಿಕಾರ ಮಾತನಾಡಿ, ಬಾಬೂಜಿ ಅವರು ದೇಶದ ಆಹಾರ ಪದ್ಧತಿಗೆ ಒತ್ತು ನೀಡಿದ್ದರು. ಆಹಾರ ಸ್ವಾವಲಂಭನೆ, ಮಿಲಿಟರಿ ಸಶಸ್ತ್ರ ಪಡೆಗೆ ಬಲ ತುಂಬುವ ಕೆಲಸ ಮಾಡಿದ್ದರು. ಯುವಕರು ಅವರ ಜೀವನಾದರ್ಶಗಳ ಕುರಿತು ಚಿಂತನೆ ನಡೆಸುವದು ಅಗತ್ಯವಾಗಿದೆ ಎಂದರು.
ಗ್ರೇಡ್-2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ, ಪ್ರವೀಣ ಸಜ್ಜನ್, ಮಾದಿಗ ಸಮಾಜದ ಮುಖಂಡರಾದ ನಂದಪ್ಪ ಪೀರಾಪೂರ, ಬಸವರಾಜ ಹಗರಟಗಿ, ಶರಣು ಕಟ್ಟಿಮನಿ, ಸಿದ್ದಣ್ಣ ಮೇಲಿಮನಿ, ಪ್ರಕಾಶ ಆನೇಕಿ, ಭೀಮಣ್ಣ ಕಟ್ಟಿಮನಿ, ಸಿದ್ದಣ, ಮಾನಪ್ಪ ಕಟ್ಟಿಮನಿ, ಮಾಳಿಗೆಪ್ಪ ಮೇಲಿನಮನಿ, ಕಾಶಿನಾಥ ಹಾದಿಮನಿ, ಗೋಪಾಲ ಕಟ್ಟಿಮನಿ, ಭೀಮಣ್ಣ ಚಾನಿ, ಭೀಮಣ್ಣ ಬೇವಿನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.