ಬದ್ದೇಪಲ್ಲಿ(ಸೈದಾಪುರ): ‘ಭವಿಷ್ಯತ್ತಿನ ಸದೃಡ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯ’ ಎಂದು ಶಿಕ್ಷಕ ಅಬಿನ್ ಥಾಮಸ್ ಹೇಳಿದರು.
ಸಮೀಪದ ಬದ್ದೇಪಲ್ಲಿ ಗ್ರಾಮದ ನೋಬಲ್ ಪಬ್ಲಿಕ್ ಇಂಗ್ಲಿಷ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
‘ಮಣ್ಣಿನ ಮುದ್ದೆಯಂತಿರುವ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿ ಭವಿಷ್ಯತ್ತನ್ನು ಕಟ್ಟಿಕೊಡುವ ಶಿಕ್ಷಕನ ಕಾರ್ಯ ಸಾಧನೆ ಶ್ಲಾಘನೀಯವಾಗಿದೆ. ಒಬ್ಬ ಸಾಮಾನ್ಯ ಸೇವಕನಿಂದ, ರಾಷ್ಟ್ರಪತಿಯವರೆಗೆ ಎಲ್ಲರೂ ಶಿಕ್ಷಕನಿಂದ ಕಲಿತಿರುತ್ತಾರೆ. ಸಮಾಜದಲ್ಲಿ ಶಿಕ್ಷಕನಿಗೆ ಅತ್ಯಮೂಲ್ಯ ಸ್ಥಾನ ನೀಡಲಾಗಿದೆ’ ಎಂದರು.
ಶಿಕ್ಷಕ ಮಾಳಪ್ಪ ಪೂಜಾರಿ ಮಾತನಾಡಿದರು. ಶಿಕ್ಷಕಿ ಸಾವಿತ್ರಿ, ಸುರೇಖಾ, ಮಮತಾ, ಸುಪ್ರಿಯಾ, ನೇತ್ರಾ, ಅಕ್ಷರಾ, ರಂಜಿತಾ, ರೇಣುಕಾ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.