ಹುಣಸಗಿ: ‘ಕೃಷ್ಣೆಯ ಕೃಪೆಯಿಂದ ಈ ಭಾಗವೆಲ್ಲ ಹಚ್ಚಹಸಿರಾಗಿ ಕಂಗೊಳಿಸುವ ಮೂಲಕ ಎಲ್ಲರ ಬಾಳು ಬೆಳಗುವಂತೆ ಮಾಡಿದ್ದಾಳೆ. ಆ ತಾಯಿ ಸ್ಮರಿಸಿ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ರೈತ ಮುಖಂಡ ಶಿವರಾಜ ಹೊಕ್ರಾಣಿ ಹೇಳಿದರು.
ತಾಲ್ಲೂಕಿನ ಗೆದ್ದಲಮರಿ ಗ್ರಾಮದ ಹೊರವಲಯದಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
‘ಕೃಷ್ಣೆಯ ಉಗಮಸ್ಥಾನ ಮಹಾಬಲೇಶ್ವರ ನದಿಪಾತ್ರದಲ್ಲಿ ಮಳೆಯಾಗುತ್ತಿದ್ದರಿಂದಾಗಿ ನಮ್ಮ ಭಾಗದಲ್ಲಿ ನದಿ ತುಂಬಿ ಹರಿಯುತ್ತಿದೆ. ಸಮೃದ್ಧವಾಗಿ ಮಳೆಯಾಗಿ ಎರಡೂ ಬೆಳೆಗಳಿಗೂ ನೀರು ಸಿಗುವಂತಾಗಲಿ’ ಎಂದರು.
ಮಹಿಪಾಲರಡ್ಡಿ ಸಾಹುಕಾರ, ಚನ್ನಪ್ಪ ಬಳಿ, ರಾಘವೇಂದ್ರ ಕುಲಕರ್ಣಿ, ಜೀನಪ್ಪ ತಿರುಪತಿ, ಭೀಮಣ್ಣ ದೇವರಾಜ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.