ಶಹಾಪುರ: ನಾಗರಪಂಚಮಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಭಾರ ಹೊರುವ ಸ್ಪರ್ಧೆಯಲ್ಲಿ ತಾಲ್ಲೂಕಿನ ಇಟಗಾ (ಎಸ್) ಗ್ರಾಮದ ಯುವಕ ನಾಗರಾಜ ಈರಣ್ಣ ದೊಡ್ಮನಿ ಒಂದು ಕ್ವಿಂಟಲ್ ಜೋಳದ ಚೀಲ ಹೊತ್ತುಕೊಂಡು 13 ಕಿ.ಮೀ ಕ್ರಮಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಾಗರಪಂಚಮಿ ಅಂಗವಾಗಿ ಗೆಳೆಯರು ಸೇರಿಕೊಂಡು ಭಾರ ಹೊರುವ ಸ್ಪರ್ಧೆ ಏರ್ಪಡಿಸಿದ್ದರು. ನಾಗರಾಜ ಇಟಗಾ (ಎಸ್) ಗ್ರಾಮದಿಂದ ಶಹಾಪುರ ನಗರದ ಹನುಮಾನ ದೇವಾಲಯದವರೆಗೂ (13 ಕಿ.ಮೀ) ಒಂದು ಕ್ವಿಂಟಲ್ ಜೋಳದ ಚೀಲವನ್ನು ಭುಜದ ಮೇಲೆ ಹೊತ್ತುಕೊಂಡು ಬಂದು ₹ 50 ಸಾವಿರ ನಗದು ಬಹುಮಾನ ಪಡೆದಿದ್ದಾರೆ. ಈ ದೂರವನ್ನು ಕ್ರಮಿಸಲು ಏಳು ಗಂಟೆ ಸಮಯದ ಮಿತಿ ನಿಗದಿಪಡಿಸಲಾಗಿತ್ತು. ಆದರೆ, ಅವಧಿಗೆ ಮುನ್ನವೇ ಕೇವಲ ಆರು ಗಂಟೆಗಳಲ್ಲಿ ತಮ್ಮ ಗುರಿಯನ್ನು ತಲುಪಿದರು. ನಾಗರಾಜ ಅವರಿಗೆ ಅವರ ಗೆಳೆಯರು, ಗ್ರಾಮಸ್ಥರು ಹುರಿದುಂಬಿಸಿದರು.
ಅಷ್ಟೂ ದೂರವನ್ನು ನಾಗರಾಜ ಬರಿಗಾಲಿನಲ್ಲಿ ಕ್ರಮಿಸಿದ್ದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.