ಸುರಪುರ: ತಾಲ್ಲೂಕಿನ ಕೆ.ತಳ್ಳಳ್ಳಿ ಗ್ರಾಮದ ಹೊರವಲಯದಲ್ಲಿರುವ ಗೋಣಿಮಟ್ಟಿ ಬಸವೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯವನ್ನು ಬಸವ ಮಾಲಾಧಾರಿಗಳು ನಡೆಸಿದರು.
ಸುಮಾರು 20 ವರ್ಷಗಳಿಂದ ದೇವಸ್ಥಾನದ ವಿಚಾರದಲ್ಲಿ ಯಾವುದೇ ಕಾರ್ಯಚಟುವಟಿಕೆಗಳು ಜರುಗಿರುವುದಿಲ್ಲ. ಇದನ್ನು ಗಮನಿಸಿದ ಬಸವ ಮಾಲಾಧಾರಿಗಳು ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಸೇರಿದಂತೆ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ, ಕಲ್ಲು-ಮುಳ್ಳು, ಗಿಡ-ಗಂಟಿಗಳನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯ ಮಾಡಿದರು.
ಮಾಲಾಧಾರಿಗಳ ಸ್ವಚ್ಛತಾ ಕಾರ್ಯಕ್ಕೆ ಕೆ.ತಳ್ಳಳ್ಳಿ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಸವ ಮಾಲಾಧಾರಿಗಳಾದ ಶರಣಗೌಡ ವಡಿಗೇರಿ, ಚನ್ನಗೌಡ ಚನ್ನೂರ, ಅಶೋಕ ಕಾಕರಗಲ್ಲ, ರಾಘವೇಂದ್ರ ಮಾಸ್ತರ, ನಾಗರಾಜ ಪತ್ತಾರ, ಕುಮಾರ ದೊರೆ, ಕರಿಬಸಪ್ಪಗೌಡ ಚನ್ನೂರ, ದೇವಣ್ಣ ಅಲಗೂರ, ಶ್ರೀಕಾಂತ ಕಮತಗಿ, ವಿಶ್ವರಾಧ್ಯ ಮಾಲಿ ಪಾಟೀಲ್, ಆನಂದ ಅಲಗೂರ, ಶಿವರಾಜ ಕಮತಗಿ, ಶರಣಗೌಡ ಕಾಕರಗಲ್ಲ ಸೇರಿ ಇತರರಿದ್ದರು.
ಶ್ರಾವಣ ಮಾಸದ ಕೊನೆಯ ಸೋಮವಾರ ದೇವಸ್ಥಾನದಲ್ಲಿ (ಖಾಂಡ) ಮಹಾಪ್ರಸಾದ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.