ADVERTISEMENT

ಕೂಸು ಹುಟ್ಟುವ ಮುನ್ನ ಕುಲಾಯಿ; ಕಾಂಗ್ರೆಸ್ ವಿರುದ್ಧ ಬಿ.ಸಿ ಪಾಟೀಲ ಟೀಕೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 5:26 IST
Last Updated 13 ಜನವರಿ 2022, 5:26 IST
ಬಿ.ಸಿ ಪಾಟೀಲ
ಬಿ.ಸಿ ಪಾಟೀಲ   

ಶಹಾಪುರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ತಮ್ಮ ಒಣ ಪ್ರತಿಷ್ಠೆ ಹಾಗೂ ಬಲ ಪ್ರದರ್ಶನಕ್ಕಾಗಿಮೇಕೆದಾಟು ಪಾದ ಯಾತ್ರೆ ನಡೆಸುತ್ತಿದ್ದು, ಈ ಇಬ್ಬರ ನಡುವಿನ ಅಧಿಕಾರದ ಹಪಾಹಪಿ ಯಿಂದ ‘ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿದಂತೆ’ ಆಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಟೀಕಿಸಿದರು.

ಭೀಮರಾಯನಗುಡಿಯಲ್ಲಿ ಬುಧ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಾಂಗ್ರೆಸ್‌ಗೆ ನಿಜ ವಾಗಿಯೂ ಜನರಪರವಾದ ಕಾಳಜಿ ಇಲ್ಲ. ತಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ, ಈ ಯೋಜನೆಯನ್ನು ಏಕೆ ಅನು ಷ್ಠಾನಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.

ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಈಗಾಗಲೇ ದೂರು ದಾಖಲಿಸಿಕೊಳ್ಳಲಾಗಿದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಲಿದೆ. ಕಾನೂನು ಉಲ್ಲಂಘಿಸಿ ನಡೆದರೆ ಜನರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ADVERTISEMENT

ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹವಾಗಿದೆ. ಸಚಿವ ಸಂಪುಟ ಬದಲಾವಣೆಯಾದರೆ ಗೃಹ ಸಚಿವ ಖಾತೆಗೆ ಪಟ್ಟು ಹಿಡಿಯುವಿರಾ ಎಂದು ಪ್ರಶ್ನಿಸಿದಾಗ, ‘ಹಾಗೇನು ಇಲ್ಲ. ಒಂದು ವೇಳೆ ನೀಡಿದರೇ ಕೃಷಿ ಹಾಗೂ ಗೃಹ ಖಾತೆಗಳನ್ನು ನಿಭಾಯಿಸುತ್ತೇನೆ‌’ ಎಂದರು. ಬೆಳೆ ಪರಿಹಾರ ನೀಡಿದೆ ಎಂದು ಹಾರಿಕೆ ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.