ಗುರುಮಠಕಲ್: ನಮ್ಮ ಗ್ರಾಮದ ಬೂತ್ ಮಟ್ಟದಲ್ಲಿ ನಾವು ಗೆದ್ದರೆ ಕ್ಷೇತ್ರದಲ್ಲಿಯೂ ಗೆಲ್ಲುವುದು ಸಾಧ್ಯ. ಆದ್ದರಿಂದ ಪ್ರತಿ ಬೂತ್ ಮಟ್ಟದಲ್ಲಿ ವಿಜಯ ಅಭಿಯಾನ ನಡೆಸಬೇಕಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮೌನೇಶ ಬೆಳೆಗೆರೆ ತಿಳಿಸಿದರು.
ತಾಲ್ಲೂಕಿನ ಎಲ್ಹೇರಿ ವ್ಯಾಪ್ತಿಯ ಗೋಪಾಳಪುರ, ಎಲ್ಹೇರಿ, ಧರ್ಮಪುರ, ಗುಂಜನೂರ, ಚಿನ್ನಾಕಾರ, ಕಾಕಲವಾರ, ಸಿದ್ದಪೂರ, ಎಂ.ಟಿ.ಪಲ್ಲಿ ಗ್ರಾಮಗಳಲ್ಲಿ ಗುರುವಾರ ಬೂತ್ ಮಟ್ಟದ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಪಕ್ಷದ ಮಂಡಲ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹೊನಗೇರಾ, ಮಂಡಲ ಘಟಕದ ಯುವ ಮೋರ್ಚಾ ಅಧ್ಯಕ್ಷ ವಿನಾಯಕರಾವ ಜನಾರ್ಧನ, ಪ್ರಧಾನ ಕಾರ್ಯದರ್ಶಿ ಶರಣು ಎಲ್ಹೇರಿ, ಎಲ್ಹೇರಿ ಶಕ್ತಿಕೇಂದ್ರದ ಅಧ್ಯಕ್ಷ ಶಂಕರ ಕಂದಕೂರ, ಸಾಬಣ್ಣ ಸಿದ್ದಾಪುರ, ಸದಾಶಿವರೆಡ್ಡಿ ಬುದೂರ, ಬಸ್ಸು ಗೋಪಾಳಪುರ, ಸಾಬಣ್ಣ, ಮರಲಿಂಗ ಗೋಪಾಳಪುರ, ನಾಗಪ್ಪ ಹೊಸ್ಮನಿ, ವೆಂಕಟೇಶ ಯಾದವ, ಚನ್ನಬಸವ, ಸುರೇಶ, ಪ್ರವೀಣ ಸೇರಿದಂತೆ ಬೂತ್ ಮಟ್ಟದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.