ADVERTISEMENT

ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌: ಬಾಬುರಾವ್ ಚಿಂಚನಸೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 4:46 IST
Last Updated 1 ಡಿಸೆಂಬರ್ 2021, 4:46 IST
ಸೈದಾಪುರ ಪಟ್ಟಣದಲ್ಲಿ ಆಯೋಜಿಸಿದ ಬಿಜೆಪಿ ಪ್ರಚಾರ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಮಾಜಿ ಸಚಿವ ಬಾಬುರಾವ ಚಿಂಚನಸೂರ, ಅಭ್ಯರ್ಥಿ ಡಾ.ಬಿ.ಜಿ.ಪಾಟೀಲ, ನಾಗರತ್ನಾ ಕುಪ್ಪೆ, ಶರಣಭೂಪಾಲರೆಡ್ಡಿ ಇದ್ದರು
ಸೈದಾಪುರ ಪಟ್ಟಣದಲ್ಲಿ ಆಯೋಜಿಸಿದ ಬಿಜೆಪಿ ಪ್ರಚಾರ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಮಾಜಿ ಸಚಿವ ಬಾಬುರಾವ ಚಿಂಚನಸೂರ, ಅಭ್ಯರ್ಥಿ ಡಾ.ಬಿ.ಜಿ.ಪಾಟೀಲ, ನಾಗರತ್ನಾ ಕುಪ್ಪೆ, ಶರಣಭೂಪಾಲರೆಡ್ಡಿ ಇದ್ದರು   

ಸೈದಾಪುರ: ದೇಶದಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತಿದೆ. ಇದರಿಂದ ಈ ಭಾಗದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುವ ಬಿಜೆಪಿ ಅಭ್ಯರ್ಥಿ ಡಾ. ಬಿ.ಜಿ ಪಾಟೀಲ ಅವರನ್ನು ಬಹುಮತದಿಂದ ಗೆಲ್ಲಿಸುವ ಅಗತ್ಯವಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.

ಪಟ್ಟಣದಲ್ಲಿ ಗುರುಮಠಕಲ್ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಕಲಬುರ್ಗಿ- ಯಾದಗಿರಿ ವಿಧಾನ ಪರಿಷತ್ತು ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್ ಸಂಕಷ್ಟ ಸಂದರ್ಭದಲ್ಲಿಯೂ ಉತ್ತಮ ಆಡಳಿತವನ್ನು ನೀಡಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ADVERTISEMENT

ಅಭ್ಯರ್ಥಿ ಬಿ.ಜಿ.ಪಾಟೀಲ ಮಾತನಾಡಿ, ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರ ನೀಡುವ ಅನುದಾನವನ್ನು ಎಲ್ಲಾ ವಿಧಾನ ಸಭೆ ಕ್ಷೇತ್ರಗಳ ಶಾಸಕರ ಗಮನಕ್ಕೆ ತಂದು ಹಂಚಿಕೆ ಮಾಡಿದ್ದೇನೆ. ಮುಂದೆಯೂ ಈ ಭಾಗದ ಸಮಸ್ಯೆಗಳ ಧ್ವನಿಯಾಗಿ ಇರುತ್ತೇನೆ. ಮತದಾರರು ಮತ್ತೊಮ್ಮೆ ಅವಕಾಶ ನೀಡಬೇಕು ಎಂದು
ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲರೆಡ್ಡಿ ಮಾತನಾಡಿ, ಕಾರ್ಯಕರ್ತರೆಲ್ಲ ಸಂಘಟಿತರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸುವ ಕಡೆ ಕಾರ್ಯ ಪ್ರವೃತ್ತರಾಗಬೇಕೆಂದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ನಾಗರತ್ನ ಕುಪ್ಪಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ, ಸಾಯಿಬಣ್ಣ ಬೋರಬಂಡಾ, ಗ್ರಾ.ಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಉಪಾಧ್ಯಕ್ಷೆ ನೇತ್ರಾವತಿ, ಮಂಡಲಾಧ್ಯಕ್ಷ ಮಲ್ಲಿಕಾರ್ಜುನ ಹೊನಿಗೇರ, ಭೀಮಣ್ಣಗೌಡ ಕ್ಯಾತನಾಳ, ಪ್ರಕಾಶಗೌಡ ಸೈದಾಪುರ, ಶರಣಗೌಡ ಬಾಡಿಯಾಲ, ಚಂದಪ್ಪ ಕಾವಲಿ, ಬಸಪ್ಪಗೌಡ, ಸಣ್ಣಸಿದ್ರಾಮಪ್ಪಗೌಡ ಬೆಳಗುಂದಿ, ವೆಂಕಟರೆಡ್ಡಿ ಅಬ್ಬೆತುಮಕೂರು, ವಿಜಯ ಚಿಂಚನಸೂರ, ಮಲ್ಲಣ್ಣಗೌಡ ಕೂಡಲೂರು, ದೇವಿಂದ್ರನಾಥ, ಗುರುಕಾಮ್, ಮಲ್ಲಣ್ಣಗೌಡ ದುಪ್ಪಲ್ಲಿ, ಶ್ರೀಧರ ಘಂಟಿ ಬಾಡಿಯಾಲ, ಶ್ರೀದೇವಿ ಶೆಟ್ಟಿಹಳ್ಳಿ, ಮರೆಪ್ಪ ರಾಂಪುರ, ಭೀಮಣ್ಣ ಮಡಿವಾಳ, ಅಂಬಿಕಾ, ಚನ್ನಮ್ಮ ಪೂಜಾರಿ, ಲಕ್ಷ್ಮಣ ನಾಯಕ, ಮಲ್ಲೇಶ ನಾಯಕ, ಅಂಬರೀಶ ಕೂಡಲೂರು, ಶ್ರೀನಿವಾಸ ಕಡೇಚೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.