ADVERTISEMENT

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು: ಶಾಸಕ ರಾಜಾ ವೆಂಕಟಪ್ಪನಾಯಕ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 5:14 IST
Last Updated 8 ಏಪ್ರಿಲ್ 2022, 5:14 IST
ಸುರಪುರದಲ್ಲಿ ಯಡಹಳ್ಳಿ ಗ್ರಾಮದ ಕೆಲವು ಬಿಜೆಪಿ ಮುಖಂಡರು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು
ಸುರಪುರದಲ್ಲಿ ಯಡಹಳ್ಳಿ ಗ್ರಾಮದ ಕೆಲವು ಬಿಜೆಪಿ ಮುಖಂಡರು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು   

ಸುರಪುರ: ಯಡಹಳ್ಳಿ ಗ್ರಾಮದ ಕೆಲವು ಮುಖಂಡರು ಬಿಜೆಪಿ ತೊರೆದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಸಮ್ಮುಖದಲ್ಲಿ ಗುರುವಾರ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ರಾಜಾ ವೆಂಕಟಪ್ಪ ನಾಯಕ, ‘ಬಿಜೆಪಿ ಸರ್ಕಾರಗಳ ದುರಾಡಳಿತಕ್ಕೆ ಜನರು ರೋಸಿಹೊಗಿ ಕಾಂಗ್ರೆಸ್‌ನತ್ತ ಮುಖಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು’ ಎಂದು ಹೇಳಿದರು.

ನಿಂಗಣ್ಣಗೌಡ ಕಚಕನೂರ, ದೇವಪ್ಪ ಬಬಲಾದಿ, ಸಾಯಬಣ್ಣ ಬಬಲಾದಿ, ಭೂಮಣ್ಣ ಪೂಜಾರಿ ಹಿರೇಕುರುಬ, ಮಾಳಪ್ಪ ಹಿರೇಕುರುಬ, ಪರಸಪ್ಪ ತಮದೊಡ್ಡಿ, ಕೂಡ್ಲಿಗೆಪ್ಪ ಸೇರಿದಂತೆ ಹಲವರು ಕಾಂಗ್ರೆಸ್‌ಗೆ ಸೇರಿದರು.

ADVERTISEMENT

ಮುಖಂಡರಾದ ವಿಠಲ್ ಯಾದವ, ನಿಂಗರಾಜ ಬಾಚಿಮಟ್ಟಿ, ಮಲ್ಲಣ್ಣ ಸಾಹು ಮುದೋಳ, ರಾಜಾ ಸಂತೋಷ ನಾಯಕ, ರಾಜಾ ಕುಮಾರ ನಾಯಕ, ಭೀಮರಾಯ ಮೂಲಿಮನಿ, ಶಿವರಾಯ ಕಾಡ್ಲೂರು, ಗೋಪಾಲ ದೊರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.