
ಹುಣಸಗಿ: ಮಾಜಿ ಸಚಿವ ರಾಜುಗೌಡ ಹಾಗೂ ಸಹೋದರ ಬಬಲುಗೌಡ ಅವರ ಜನ್ಮದಿನದ ಅಂಗವಾಗಿ ಈ ಬಾರಿ ಬಡವರಿಗೆ ಬೆಚ್ಚಗಿನ ಹೊದಿಕೆ ಕಿಟ್ ನೀಡಲಾಗುತ್ತಿದೆ ಎಂದು ಮುಖಂಡ ವಿರೇಶ ಚಿಂಚೋಳಿ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರ ಹಾಗೂ ಸಹೋದರ ಹನುಮಂತನಾಯಕ (ಬಬಲುಗೌಡ) ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯುಕ್ರಮದಲ್ಲಿ ಮಾತನಾಡಿದರು.
‘ಬಡವರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ತಾಲ್ಲೂಕಿನ ಸಾವಿರಾರು ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ. ಸಚಿವರಿದ್ದಾಗ ಉದ್ಯೋಗ ಮೇಳ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಐಎಎಸ್, ಕೆಎಎಸ್ ತರಬೇತಿ ಸೇರಿ ಹಲವು ಸಾಮಾಜಿಕ, ಜನಪರ ಕಾರ್ಯ ಮಾಡಿದ್ದಾರೆ’ ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ, ತಾಲ್ಲೂಕಿನ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಪ್ರತಿವರ್ಷ ಕ್ರಿಕೆಟ್ ಟೂರ್ನಿ ಆಯೋಜಿಸಿ, ಪ್ರೋತ್ಸಾಹಿಸುತ್ತಿದ್ದಾರೆ’ ಎಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಮಹಾಂತಸ್ವಾಮಿ ವೃತ್ತದಲ್ಲಿ ಪೂಜೆ ಹಾಗೂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ತಾಲ್ಲೂಕಿನ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ, ಅಮರಣ್ಣ ದೇಸಾಯಿ, ಸೋಮಶೇಖರ ಸ್ಥಾವರಮಠ, ಬಸಣ್ಣ ದೇಸಾಯಿ, ತಿಪ್ಪಣ್ಣ ಚಂದಾ, ಬಸಲಿಂಗಯ್ಯ ಹಿರೇಮಠ, ಹೊನ್ನಪ್ಪ ದೇಸಾಯಿ, ಕಿಡಿಗಣ್ಣಯ್ಯ ಮುತ್ಯಾ, ಮೇಲಪ್ಪ ಗುಳಗಿ, ಬಸಣ್ಣ ಬಾಲಗೌಡ್ರ, ನಾಗಯ್ಯ ದೇಸಾಯಿಗುರು, ಆನಂದ ಬಾರಿಗಿಡ, ಬಸವರಾಜ ವೈಲಿ, ವಿನೋದ ದೊರಿ, ಮಹೇಶ ಸ್ಥಾವರಮಠ, ವೆಂಕಟೇಶ ಜೋಶಿ, ಗೌಸ್ ಮುನ್ಸಿ, ಪ್ರಶಾಂತ ಹಿರೇಮಠ, ಚನ್ನು ಹಿರೇಮಠ, ವೆಂಕಟೇಶ ಇಸಾಂಪೂರ, ಸೋಮನಗೌಡ ಪಾಟೀಲ, ಮಂಜು ಗುಡಿಹಾಳ, ಪರಮಣ್ಣ ಕಟ್ಟಿಮನಿ, ಗೌಡಪ್ಪ ಸಿದ್ದಾಪುರ, ಭೀಮರಾಯ ತೀರ್ಥ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.