ಹುಣಸಗಿ: ಜಾತಿ ಸಮೀಕ್ಷೆ ಗೊಂದಲ ನಿವಾರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎಂ.ಬಸವರಾಜ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಶ್ಯಾಮಸುಂದರ ದೇಶಪಾಂಡೆ ಮಾತನಾಡಿ, ‘ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಾತಿ ಸಮೀಕ್ಷೆ ಕೈಗೊಳ್ಳುತ್ತಿದೆ. ಆದರೆ ಬ್ರಾಹ್ಮಣ ಸಮಾಜವನ್ನು ವಿವಿಧ ಉಪ ಪಂಗಡಗಳ ಹೆಸರಿನಲ್ಲಿ ಚದುರಿಸುವ ಕೆಲಸ ಮಾಡುತ್ತಿದೆ’ ಎಂದರು.
‘ರಾಜ್ಯದಲ್ಲಿ ಬ್ರಾಹ್ಮಣ ಜನಸಂಖ್ಯೆ ಕಡಿಮೆ ಇದೆ. ಇದನ್ನು ಉಪಜಾತಿಗಳ ಹೆಸರಿನಲ್ಲಿ, ಬ್ರಾಹ್ಮಣ ಮುಸ್ಲಿಂ, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ವಿಂಗಡಣೆ ಮಾಡುವ ಮೂಲಕ ಅನಗತ್ಯ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಖಂಡಿಸಿದರು.
ಕೇಂದ್ರ ಕಾರ್ಯಕಾರಿಣಿ ಸದಸ್ಯ ಗಂಗಾಧರ ಜೋಶಿ ಹಾಗೂ ಜಿಲ್ಲಾ ಪ್ರತಿನಿಧಿ ಪ್ರಾಣೇಶ ದೇಶಪಾಂಡೆ ಮಾತನಾಡಿ, ‘38 ವರ್ಷಗಳ ಬಳಿಕ ಜಾತಿ ಕಾರ್ಯ ನಡೆಸಲಾಗುತ್ತಿದೆ. ಈ ಅಂಶಗಳಿಂದ ಸಮಾಜ ಚದುರಿಹೋಗುತ್ತದೆ. ಎಲ್ಲ ಉಪಜಾತಿಗಳನ್ನು ತೆಗೆದು ಬ್ರಾಹ್ಮಣ ಎನ್ನುವ ಶಬ್ದವನ್ನು ಸೇರಿಸುವ ಮೂಲಕ ಪರಿಷ್ಕರಿಸಿ ಆದೇಶ ಮಾಡಬೇಕು’ ಎಂದು ಒತ್ತಾಯಿಸಿದರು.
ವರಹಳ್ಳೆರಾಯ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ದೇಶಪಾಂಡೆ, ತಾಲ್ಲೂಕು ಬ್ರಾಹ್ಮಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನರಸಿಂಹ ಜಹಗಿರದಾರ, ಪ್ರಾಣೇಶ್ ಕುಲಕರ್ಣಿ, ಗಿರೀಶ್ ಪಾಟೀಲ, ದತ್ತಾತ್ರೇಯ ಜಹಗಿರದಾರ, ಮಾರುತಿ ಕುಲಕರ್ಣಿ, ರವಿ ಕುಲಕರ್ಣಿ, ಪ್ರವೀಣ ಜಮದರಖಾನ, ವೆಂಕಟೇಶ ಅರಳಿಗಿಡದ, ಶ್ರೀಹರಿ ಕುಲಕರ್ಣಿ, ವಿನಯ ಜೋಶಿ, ಚಂದ್ರಹಾಸ ಕನ್ನಳ್ಳಿ, ಶ್ರೀನಿವಾಸ ಕುಲಕರ್ಣಿ, ಲಕ್ಷ್ಮಿಕಾಂತ್ ದ್ಯಾಮನಾಳ, ವೆಂಕಟೇಶ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.