ADVERTISEMENT

Karnataka Budget 2021: ಯಾದಗಿರಿ ಜಿಲ್ಲೆಗೆ ಬೇಕಿದೆ ಹತ್ತಿ ಸಂಸ್ಕರಣ ಘಟಕ

ಅತಿ ಹೆಚ್ಚು ಹತ್ತಿ ಬೆಳೆ: ಸರ್ಕಾರದ್ದೇ ಕಾರ್ಖಾನೆ ಇರಲಿ: ರೈತರ ಆಗ್ರಹ

ಬಿ.ಜಿ.ಪ್ರವೀಣಕುಮಾರ
Published 5 ಮಾರ್ಚ್ 2021, 10:47 IST
Last Updated 5 ಮಾರ್ಚ್ 2021, 10:47 IST
ಹತ್ತಿ ಬೆಳೆ ಸಾಂದರ್ಭಿಕ ಚಿತ್ರ
ಹತ್ತಿ ಬೆಳೆ ಸಾಂದರ್ಭಿಕ ಚಿತ್ರ   

ಯಾದಗಿರಿ: ಮುಂಗಾರು ಹಂಗಾಮಿನಲ್ಲಿ ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಹತ್ತಿ ಹೆಚ್ಚು ಬೆಳೆಯಲಾಗುತ್ತದೆ. ಆದರೆ, ಇಲ್ಲಿ ಸೂಕ್ತಸಂಸ್ಕರಣ ಘಟಕವಿಲ್ಲ. ಸರ್ಕಾರ ಖರೀದಿ ಕೇಂದ್ರ ತೆರೆಯುವ ಮುನ್ನವೇ ರೈತರು ಸಿಕ್ಕ ಬೆಲೆಗೆ ಹತ್ತಿ ಮಾರುತ್ತಾರೆ. ಇದರ ಪರಿಣಾಮ ರೈತರು ನಷ್ಟ ಅನುಭವಿಸುತ್ತಾರೆ.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ 15,27,98 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. ನೀರಾವರಿ 54,666 ಖುಷ್ಕಿ ಜಮೀನನಿನಲ್ಲಿ 98,132 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.

ಇದು ಕಳೆದ ವರ್ಷಕಿಂತ ಶೇ 10ರಷ್ಟು ಹೆಚ್ಚಳವಾಗಿದೆ. ಇಷ್ಟು ವ್ಯಾಪಕವಾಗಿ ಬೆಳೆಯಲಾಗುವ ಹತ್ತಿಗೆ ಸೂಕ್ತ ಮಾರುಕಟ್ಟೆ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ರೈತರು ಹೇಳುತ್ತಾರೆ.

ADVERTISEMENT

‘ಸರ್ಕಾರದಿಂದಲೇಹತ್ತಿ ಸಂಸ್ಕರಣ ಘಟಕ ಸ್ಥಾಪನೆಯಾದಲ್ಲಿ, ರೈತರಿಗೆ ಅವಶ್ಯವಿದ್ದಾಗ ಹತ್ತಿ ಮಾರಲು ಅನುಕೂಲ ಆಗುತ್ತದೆ. ರಾಜ್ಯದಲ್ಲಿ ಎಲ್ಲ ಭಾಗದಲ್ಲಿ ಸರ್ಕಾರದ ಹತ್ತಿ ಮಿಲ್‌ಗಳ ಇಲ್ಲ. ಇದರಿಂದ ಸರ್ಕಾರಕ್ಕೂ ನಷ್ಟ ಆಗುತ್ತಿದೆ. ಹೀಗಾಗಿ ಘಟಕ ಆರಂಭಿಸಿದರೆ ಉಪಯುಕ್ತ’ ಎಂದು ಅವರು ಹೇಳುತ್ತಾರೆ.

‘ಜಿಲ್ಲೆಯಲ್ಲಿ ಹತ್ತಿ ಖರೀದಿ ಕೇಂದ್ರಗಳನ್ನು ಸರ್ಕಾರವೇ ತಡವಾಗಿ ಆರಂಭಿಸುತ್ತದೆ. ಆಗ ಖಾಸಗಿ ಜಿನ್ನಿಂಗ್‌ ಫ್ಯಾಕ್ಟರಿ ಮಾಲೀಕರು ರೈತರಿಂದ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಇದರಿಂದ ಇತ್ತ ರೈತರು, ಸರ್ಕಾರಕ್ಕೂ ನಷ್ಟವಾಗುತ್ತದೆ. ಈ ಕಾರಣಕ್ಕೆ ಸರ್ಕಾರವೇ ಘಟಕ ಆರಂಭಿಸುವುದು ಸೂಕ್ತ’ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಹತ್ತಿ ಹೆಚ್ಚು ಬೆಳೆದಾಗ ಮಾತ್ರ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ. ಇದರ ಬದಲು ಎಪಿಎಂಸಿಯ ಒಂದು ಕಡೆ ಶಾಶ್ವತವಾಗಿ ಅಂಗಡಿ ತೆರೆದರೆ, ರೈತರಿಗೆ ಲಾಭವಾಗುತ್ತದೆ. ಪ್ರತಿ ವರ್ಷ ರೈತರು ಹೋರಾಟ ಮಾಡಿ, ಹತ್ತಿ ಖರೀದಿ ಕೇಂದ್ರ ಆರಂಭಿಸಲು ಸರ್ಕಾರಕ್ಕೆ ಒತ್ತಡ ಹೇರಬೇಕು. ಸರ್ಕಾರ ಈಗಲಾದರೂ ರೈತರ ಪರ ಕಾಳಜಿ ತೋರಲಿ’ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ತಿಳಿಸಿದರು.

ಜಿಲ್ಲೆಯ ಖಾಸಗಿ ಹತ್ತಿ ಮಿಲ್‌ಗಳ ವಿವರ
ಯಾದಗಿರಿ
; 4
ಶಹಾಪುರ; 14
ಸುರಪುರ; 2
ಒಟ್ಟು; 20

ಎಪಿಎಂಸಿಯಲ್ಲಿ ಹತ್ತಿ ಖರೀದಿಸಿರುವ ವಿವರ
2,277;
ರೈತರ ಸಂಖ್ಯೆ
10,31,76; ಕ್ವಿಂಟಲ್‌ ಹತ್ತಿ ಖರೀದಿ
₹13,51,98,836; ಮೌಲ್ಯ

***

ಸರ್ಕಾರವೇ ಹತ್ತಿ ಬೆಳೆಯುವ ಪ್ರದೇಶ ಗುರುತಿಸಬೇಕು. ಶಹಾಪುರ, ವಡಗೇರಾ ತಾಲ್ಲೂಕಿನಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ವಿಶೇಷ ಅನುದಾನ ಕಲ್ಪಿಸಬೇಕು. ಸರ್ಕಾರವೇ ಜಿನ್ನಿಂಗ್‌ ಫ್ಯಾಕ್ಟರಿ ತೆಗೆಯಬೇಕು.
-ಮಲ್ಲಿಕಾರ್ಜುನ ಸತ್ಯಂಪೇಟೆ, ವಿಭಾಗೀಯ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

***

ಜಿಲ್ಲೆಯಲ್ಲಿ ಹತ್ತಿ ಜಿನ್ನಿಂಗ್‌ ಫ್ಯಾಕ್ಟರಿ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಇದರಿಂದ ಜಿಲ್ಲೆಯ ರೈತರಿಗೆ ತುಂಬಾ ಅನುಕೂಲವಾಗುತ್ತದೆ.
-ಭೀಮರಾಯ ಎಂ., ಎಪಿಎಂಸಿ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.