ADVERTISEMENT

ತುರ್ತು ಪೊಲೀಸ್ ಸೇವೆಗೆ 112 ಕ್ಕೆ ಕರೆ ಮಾಡಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

7 ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಎಸ್ಪಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 2:25 IST
Last Updated 23 ಜನವರಿ 2021, 2:25 IST
ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಶುಕ್ರವಾರ 112 ತುರ್ತು ಸೇವೆ ಸಹಾಯವಾಣಿಗೆ ನಿಯೋಜನೆಗೊಂಡಿರುವ 7 ವಾಹನಗಳಿಗೆ ಋಷಿಕೇಶ ಭಗವಾನ್ ಸೋನವಣೆ ಹಸಿರು ನಿಶಾನೆ ತೋರಿಸಿದರು
ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಶುಕ್ರವಾರ 112 ತುರ್ತು ಸೇವೆ ಸಹಾಯವಾಣಿಗೆ ನಿಯೋಜನೆಗೊಂಡಿರುವ 7 ವಾಹನಗಳಿಗೆ ಋಷಿಕೇಶ ಭಗವಾನ್ ಸೋನವಣೆ ಹಸಿರು ನಿಶಾನೆ ತೋರಿಸಿದರು   

ಯಾದಗಿರಿ: ಯಾವುದೇ ರೀತಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಪೊಲೀಸ್ ಸಹಾಯವನ್ನು ಶೀಘ್ರವಾಗಿ ಪಡೆಯಬೇಕಾದ್ದಲ್ಲಿ ಟೋಲ್ ಫ್ರೀ ದೂರವಾಣಿ ಸಂಖ್ಯೆ-112ಗೆ ಕರೆಮಾಡಿ ಮಾಹಿತಿ ತಿಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶಭಗವಾನ್ ಸೋನವಣೆತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿಶುಕ್ರವಾರ 112 ತುರ್ತು ಸೇವೆ ಸಹಾಯವಾಣಿಗೆ ನಿಯೋಜನೆಗೊಂಡಿರುವ7 ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಇಲ್ಲಿಯವರೆಗೆ ಬಳಕೆಯಲ್ಲಿದ್ದ ಪ್ರತ್ಯೇಕ ತುರ್ತು ದೂರವಾಣಿ ಸಂಖ್ಯೆಗಳಾದ 100, 101 ಮುಂತಾದವುಗಳ ಬದಲಾಗಿ ಇನ್ನುಮುಂದೆ ಸಾರ್ವಜನಿಕರು 112ಗೆ ಕರೆ ಮಾಡುವ ಮೂಲಕ ಶೀಘ್ರವಾಗಿ ಪೊಲೀಸ್, ಅಗ್ನಿಶಾಮಕದಳ, ವಿಪತ್ತು ಇತ್ಯಾದಿ ತುರ್ತು ಸೇವೆಗಳ ನೆರವು ಪಡೆಯಬಹುದಾಗಿರುತ್ತದೆ ಎಂದರು.

ADVERTISEMENT

ಇದಕ್ಕಾಗಿ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ ಅಡಿಯಲ್ಲಿ ಸಮರ್ಪಕವಾಗಿ ಕರೆಗಳನ್ನು ನಿಭಾಯಿಸಲು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ದೇಶಾದ್ಯಂತ ಚಾಲನೆಯಲ್ಲಿರುತ್ತದೆ ಎಂದರು.

ನೂತನ ತಂತ್ರಜ್ಞಾನದೊಂದಿಗೆ ಕೇಂದ್ರೀಕೃತ, ಸಂಪರ್ಕ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ. ಧ್ವನಿ, ಎಸ್‌ಎಂಎಸ್, ಇ–ಮೇಲ್,112 ಪೊರ್ಟಲ್, ಮತ್ತು ಪ್ಯಾನಿಕ್ ಆ್ಯಪ್ ಮೂಲಕ ತುರ್ತು ವಿನಂತಿಯನ್ನು ಸಾರ್ವಜನಿಕರು ಕಳಸಬಹುದಾಗಿರುತ್ತದೆ. ಸೇವಾ ವಿನಂತಿದಾರರ ಸ್ಥಳವನ್ನು ಸ್ಪಯಂಚಾಲಿತವಾಗಿ ಗುರ್ತಿಸುವ ವ್ಯವಸ್ಥೆ ಇದಾಗಿರುವುದರಿಂದ ಬೇಗನೇ ಪೊಲೀಸ್ ಸೇವೆ. ಅವಶ್ಯಕ ಸ್ಥಳದಲ್ಲಿ ಶೀಘ್ರವಾಗಿ ಲಭ್ಯವಾಗುತ್ತದೆ ಎಂದರು.

ವಾಹನಗಳಗೆ ಅತ್ಯಾಧುನಿಕ ಸಲಕರಣೆ ಒದಗಿಸಲಾಗಿದ್ದು, ಸೂಕ್ತ ತಂತ್ರಜ್ಞಾನ ತರಬೇತಿ ಪಡೆದ ಹೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನುವಾಹನಗಳಲ್ಲಿ ಕಾರ್ಯನಿರ್ವಹಿಸಲು ನೇಮಿಸಲಾಗಿರುತ್ತದೆ ಎಂದರು.

ಡಿವೈಎಸ್‌ಪಿ ವೆಂಕಟೇಶ, ಸಂತೋಷ ಉಗಿಬಂಡಿ, ಮಹಿಳಾ ಠಾಣೆ ಪೊಲೀಸ್ ಇನ್ಸ್‌ಸ್ಪೆಕ್ಟರ್ ಹೊಸಕೇರಪ್ಪ ಕೆ, ಸೋಮಶೇಖರ ಕೆಂಚನೂರ್, ಪ್ರಕಾಶ ಯಾತನೂರ, ಸುನೀಲ್ ಮೂಲಿಮನಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.