ವಡಗೇರಾ (ಯಾದಗಿರಿ ಜಿಲ್ಲೆ): ಜಾತಿನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದು ಪರಿಶಿಷ್ಟ ಜಾರಿ ಕುಟುಂಬ ಎಚ್ಚರಿಸಿದ್ದರಿಂದ ಬೆದರಿದ ಯುವಕ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ವಿಷಯ ತಿಳಿದು ತಂದೆಯೂ ಹೃದಯಾಘಾತದಿಂದ ಇಲ್ಲಿ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಕೋನಹಳ್ಳಿ ಗ್ರಾಮದ ಮಾರ್ಗದಲ್ಲಿ ಮಹೆಬೂಬ್ (21) ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ಕೇಳಿ ತಂದೆ ಸೈಯದ್ ಮೀರಸಾಬ್ ಮುಲ್ಲಾ (50) ಅವರಿಗೆ ಹೃದಯಾಘಾತವಾಗಿದೆ. ಚಿಕಿತ್ಸೆಗಾಗಿ ಕಲಬುರಗಿಗೆ ಒಯ್ದಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಜಮೀನಿಗೆ ತೆರಳುವ ರಸ್ತೆ ಕುರಿತು ಪರಿಶಿಷ್ಟ ಜಾತಿ ಕುಟುಂಬದೊಂದಿಗೆ ಜಗಳವಾಗಿತ್ತು. ಜಾತಿ ನಿಂದನೆ ಪ್ರಕರಣ ಕುರಿತು ಕುಟುಂಬದವರು ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಈ ಸಂಬಂಧ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಈಶಪ್ಪ ನಾಯ್ಕಲ್ ಎಂಬುವರನ್ನು ಬಂಧಿಸಲಾಗಿದೆ’ ಎಂದು ವಡಗೇರಾ ಠಾಣೆ ಪಿಎಸ್‌ಐ ಮಹೆಬೂಬ್ ಅಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.