ಯಾದಗಿರಿ: ಕೇರಳ ಹಾಗೂ ಮಹಾರಾಷ್ಟ್ರದಲ್ಲಿನ ಕೋವಿಡ್ ಪರಿ ಸ್ಥಿತಿಯಕಾರಣ ದಿಂದಜಿಲ್ಲೆಯಲ್ಲಿ 8 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಡಾ. ರಾಗಪ್ರಿಯಾ ಆರ್. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಯರಗೋಳ, ಮುಡಬೂಳ, ಮಲ್ಲಾ (ಬಿ), ತಿಂಥಣಿ, ಗುರುಮಠಕಲ್, ಕುಂಟಿ ಮರಿ, ನಾರಾಯಣಪುರ, ಮಾಳನೂರಗಳಲ್ಲಿ ಪೊಲೀಸ್, ಆರೋಗ್ಯ, ಕಂದಾಯ ಅಧಿಕಾರಿಗಳ ನ್ನೊಳಗೊಂಡ ತಂಡಗಳನ್ನು ಮೂರು ಪಾಳೆಯಲ್ಲಿ ನಿಯೋಜಿಸಿ ದಿನದ 24 ಗಂಟೆ ಕಾರ್ಯನಿರ್ವಹಿಸಲು ತಿಳಿಸಿದರು.
ನೆರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ಸಂಬಂಧ ಸರ್ಕಾರ ಹೊರಡಿಸಿದ ವಿಶೇಷ ಸರ್ವೇಕ್ಷಣಾ ಚಟುವಟಿಕೆಗಳನ್ನು ಕಡ್ಡಾಯವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಚೆಕ್ ಞಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ಥರ್ಮಲ್ ಉಪಕರಣದಿಂದ ತಪಾಸಣೆ ಕೈಗೊಳ್ಳಬೇಕು. ಎಲ್ಲ ಚೆಕ್ ಪೋಸ್ಟ್‌ಗಳು ಕಡ್ಡಾಯವಾಗಿ ಕಾರ್ಯೋನ್ಮುಖವಾಗುವಂತೆ ಆಯಾ ತಾಲ್ಲೂಕಿನ ತಹಶೀಲ್ದಾರರು ನೋಡಿಕೊಳ್ಳಬೇಕು. ಉಪ ವಿಭಾಗಾಧಿಕಾರಿ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕೆಂದು ಹೇಳಿದರು.
ಚೆಕ್ ಪೋಸ್ಟ್‌ಗಳಲ್ಲಿ ನಿಯೋಜನೆಯಾದ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸಬೇಕು. ಏನಾದರೂ ಲೋಪಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ಕೇರಳ, ಮಹಾರಾಷ್ಟ್ರದಿಂದ ಬರುವವರು ಕೋವಿಡ್–19 ಲಸಿಕೆಯ ಡೋಸ್‌ಗಳನ್ನು ಪಡೆದಿದ್ದರೂ/ ಪಡೆಯದಿದ್ದರೂ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದುವುದು ಕಡ್ಡಾಯವಾಗಿದೆ. ವಿಮಾನ, ರೈಲು, ರಸ್ತೆ ಮಾರ್ಗ ಮತ್ತು ಇತರ ಸ್ವಂತ ವಾಹನಗಳ ಮುಖಾಂತರ ಆಗಮಿಸುವ ಪ್ರಯಾಣಿಕರಿಗೂ ಇದು ಅನ್ವಯವಾಗುತ್ತದೆ. ಪ್ರಯಾಣಿಕರ ನೆಗೆಟಿವ್ ಪರೀಕ್ಷಾ ವರದಿಗಳನ್ನು ಖಚಿತಪಡಿಸಿಕೊಳ್ಳುವುದು ಆಯಾ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಬಸ್ ಮೂಲಕ ಪ್ರಯಾ ಣಿಸುವವರ ನೆಗೆಟಿವ್ ವರದಿ ಯನ್ನು ಹೊಂದುವುದನ್ನು ಖಚಿತಪಡಿಸಿ ಕೊಳ್ಳುವ ಜವಾಬ್ದಾರಿಯು ಆಯಾ ಬಸ್ ನಿರ್ವಾಹಕರದ್ದಾಗಿದೆ. ಆ ಪ್ರಕಾರ ಕ್ರಮವಹಿಸುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮ ನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಇಂದುಮತಿ ಇತರೆ ಇಲಾಖಾ ಅಧಿಕಾರಿಗಳು ಇದ್ದರು.
ಚೆಕ್ ಪೋಸ್ಟ್‌ಗೆ ಎಸ್‌ಪಿ ಭೇಟಿ: ಕೊರೊನಾ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಅಂತರ್ ರಾಜ್ಯ ಚೆಕ್‌ಪೋಸ್ಟ್‌ಗಳಾದ ಪುಟಪಾಕ್ ಮತ್ತು ಕುಂಟಿಮರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.