
ಗುರುಮಠಕಲ್: ‘ಬಾಲ್ಯ ವಿವಾಹ, ದೌರ್ಜನ್ಯ ಸೇರಿದಂತೆ ಎಲ್ಲಾ ಬಗೆಯ ಶೋಷಣೆಗಳಿಂದ ಮಕ್ಕಳನ್ನು ರಕ್ಷಿಸುವ ಹಾಗೂ ತಪ್ಪತಸ್ಥರ ವಿರುದ್ಧದ ಕಠಿಣ ಕ್ರಮಕ್ಕಾಗಿ ಮಕ್ಕಳ ಹಕ್ಕುಗಳು ಜಾರಿಯಾಗಿವೆ’ ಎಂದು ಪಿಡಿಒ ನಾಗರತ್ನಾ ಹೇಳಿದರು.
ತಾಲ್ಲೂಕಿನ ಎಲ್ಹೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ವತಿಯಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
‘ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತಂದೆ-ತಾಯಿಯರ ಪಾತ್ರ ಮೊದಲ, ನಂತರ ಶಿಕ್ಷಕರದ್ದು. ಮನೆಯಿಂದಲೇ ಜಾಗೃತಿ ಕಾರ್ಯ ಆರಂಭವಾಗಲಿ, ಶಿಕ್ಷಕರೂ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ಸಾಮಾಜಿಕ ಕಾರ್ಯಕರ್ತೆ ಮಂಜುಳಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಸಲಿಂಗಮ್ಮ ಮಾತನಾಡಿ, ‘ಈಚೆಗೆ ಪೋಕ್ಸೊ ಮತ್ತು ಬಾಲ್ಯವಿವಾಹದ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಅವುಗಳಿಂದ ರಕ್ಷಣೆ ಪಡೆಯುವ ಕುರಿತು, ಕಾನೂನು ಕುರಿತು ಮಾಹಿತಿ ನೀಡಬೇಕಿದೆ. ಲಿಂಗ ತಾರತಮ್ಯ ಮಾಡದಿರಿ’ ಎಂದು ಹೇಳಿದರು.
ಮುಖ್ಯಶಿಕ್ಷಕ ಮೊಗಲ್ಲಪ್ಪ ಕೆ.ಯಾನಾಗುಂದಿ ಮಾತನಾಡಿದರು.
ಆರೋಗ್ಯ ಇಲಾಖೆಯ ಬುಗ್ಗಮ್ಮ ಸೇರಿದಂತೆ ಯಲ್ಹೇರಿ, ಜಿ.ಬಿ.ತಾಂಡಾ ಮತ್ತು ನವಬುರ್ಜ ಶಾಲೆಗಳ ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.