ADVERTISEMENT

ವಿಧಾನ ಪರಿಷತ್‌ ಚುನಾವಣೆ: ನೀತಿಸಂಹಿತೆ ಉಲ್ಲಂಘನೆ, ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 15:45 IST
Last Updated 11 ಡಿಸೆಂಬರ್ 2021, 15:45 IST
ವಿಧಾನ ಪರಿಷತ್ ಚುನಾವಣೆ
ವಿಧಾನ ಪರಿಷತ್ ಚುನಾವಣೆ   

ಯಾದಗಿರಿ: ಕಲಬುರಗಿ–ಯಾದಗಿರಿ ವಿಧಾನ ಪರಿಷತ್‌ (ಸ್ಥಳೀಯ ಸಂಸ್ಥೆ)ಗೆ ಶುಕ್ರವಾರ ನಡೆದ ಮತದಾನದ ವೇಳೆಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ತಾಲ್ಲೂಕಿನ ರಾಮಸಮುದ್ರ ಗ್ರಾಮದ ಬಟ್ಟೆ ವ್ಯಾಪಾರಿ ಖಾಸಿಂಸಾಬ್‌ ಮಹಮ್ಮದ್‌ ಖಾಜಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಮತದಾನ ಕೇಂದ್ರದ ಪಕ್ಕದಲ್ಲೇ ಬಟ್ಟೆ ಅಂಗಡಿ ತೆಗೆದುಖಾಸಿಂಸಾಬ್‌ ನೀತಿಸಂಹಿತೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದುರಾಮಸಮುದ್ರ ಮತಗಟ್ಟೆ ಅಧಿಕಾರಿ ಹಣಮಂತ ಕೆ. ದೂರು ನೀಡಿದ್ದು, ಗ್ರಾಮೀಣ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿ ಶನಿವಾರ ಪ್ರಕರಣ ದಾಖಲಾಗಿದೆ. ಪಂಚನಾಮೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಎಸ್‌ಐ ಸುರೇಶಕುಮಾರ ಚವಾಣ್‌ ಪ್ರತಿಕ್ರಿಯಿಸಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಡಿ.11ರ ಸಂಚಿಕೆಯಲ್ಲಿ ‘ಹೆಸರಿಗೆ ಮಾತ್ರ ನಿಷೇಧಾಜ್ಞೆ’ ಎನ್ನುವ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.