ADVERTISEMENT

ವಡಗೇರಾದ ಕುರುಕುಂದಿ ರೈತನಿಗೆ ಕಾಂಗ್ರೆಸ್ ಮುಖಂಡರಿಂದ ನೆರವು

ಕಾಡಾ ಮಾಜಿ ಅಧ್ಯಕ್ಷ ಕಂದಕೂರ ನೇತೃತ್ವದಲ್ಲಿ ಪಪ್ಪಾಯಿ ಹಣ್ಣು ಖರೀದಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 10:56 IST
Last Updated 29 ಏಪ್ರಿಲ್ 2020, 10:56 IST
ವಡಗೇರಾ ತಾಲ್ಲೂಕಿನ ಕುರುಕುಂದಿ ಗ್ರಾಮದಲ್ಲಿ ರೈತ ಬೆಳೆದ ಪಪ್ಪಾಯಿ ಹಣ್ಣನ್ನು ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಕಾಂಗ್ರೆಸ್‌ ಮುಂಖಂಡರು ಖರೀದಿಸಿದರು‌
ವಡಗೇರಾ ತಾಲ್ಲೂಕಿನ ಕುರುಕುಂದಿ ಗ್ರಾಮದಲ್ಲಿ ರೈತ ಬೆಳೆದ ಪಪ್ಪಾಯಿ ಹಣ್ಣನ್ನು ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಕಾಂಗ್ರೆಸ್‌ ಮುಂಖಂಡರು ಖರೀದಿಸಿದರು‌   

ಯಾದಗಿರಿ: ಲಾಕ್‌ಡೌನ್‌ ಪರಿಣಾಮ ಪಪ್ಪಾಯಿ ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟದಲ್ಲಿದ್ದ ರೈತನಿಗೆ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ನೆರವಾಗಿದ್ದಾರೆ.

ವಡಗೇರಾ ತಾಲ್ಲೂಕಿನ ಕುರುಕುಂದಿ ಗ್ರಾಮದ ರೈತ ಬಸವರಾಜಪ್ಪ ಪದ್ದಿ ಹೊಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಪ್ಪಾಯಿ ಹಣ್ಣು ಬೆಳೆದು ಮಾರಾಟ ಮಾಡಲಾಗದೆ ಕಂಗಾಲಾಗಿದ್ದರು. ಈ ವಿಷಯ ತಿಳಿದ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಮುಖಂಡರಾದ ಬಸ್ಸುಗೌಡ ಬಿಳ್ಹಾರ, ಮಾಣಿಕರೆಡ್ಡಿ ಕುರುಕುಂದಿ ರೈತನಿಂದ ಸುಮಾರು 50 ಕ್ವಿಂಟಲ್‌ ಪಪ್ಪಾಯಿ ಖರೀದಿಸುವ ಮುಖಾಂತರ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಸುರೇಶ ಜೈನ, ಹಣಮಂತ ನಾಯಕ, ಶರಣಪ್ಪ ಕೋಯಿಲೂರ, ಸಾಬರೆಡ್ಡಿ ಕಲಬುರ್ಗಿ, ಮಲ್ಲಣಗೌಡ, ರೆಡ್ಡೆಪ್ಪ, ಚಂದಪ್ಪ, ತಿಮ್ಮಣ್ಣ ನಾಯಕ, ಬೀರೇಶ, ಸೇರಿದಂತೆ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT