ವಂಚನೆ
ಯಾದಗಿರಿ: ತಾಲ್ಲೂಕಿನ ಕಡೇಚೂರು ಮತ್ತು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು (ಸಿಇಟಿಪಿ) ಕಡಿಮೆ ಸಾಮರ್ಥ್ಯದಲ್ಲಿ ನಿರ್ಮಾಣ ಮಾಡಿ ಎಂಇಇಪಿಎಲ್(ಮದರ್ ಅರ್ಥ್ ಎನ್ವಿರಾನ್ ಟೆಕ್ ಪ್ರೈವೇಟ್ ಲಿಮಿಟೆಡ್)ಗೆ ₹16 ಕೋಟಿ ವಂಚಿಸಿದ ಆರೋಪದಡಿ ತಮಿಳುನಾಡು ಮೂಲದ ಐವರ ವಿರುದ್ಧ ‘ಸೆನ್’ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನೈನ ಗ್ರೇಡಿಯಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾದ ಮೇಘನಾಥನ್ ಜೀವನಂತನ್, ಶಂಕರ್ ನಟರಾಜನ್, ಸೆಲ್ವರಾಜ್ ರವಿಚಂದ್ರನ್, ನಂದಗೋಪಾಲ್ ಪೊಲಮಾಡ ಮತ್ತು ಕಾರ್ಯದರ್ಶಿ ಸ್ವಾತಿ ಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಇಇಪಿಎಲ್‌ಗೆ 500 ಕೆಎಲ್‌ಡಿ ಸಾಮರ್ಥ್ಯದ ಔಷಧ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ₹20.15 ಕೋಟಿ ಒಪ್ಪಂದ ಆಗಿತ್ತು. ಗ್ರೇಡಿಯಂಟ್ ಕಂಪನಿಯು 300 ಕೆಎಲ್‌ಡಿ ಸಾಮರ್ಥ್ಯದ ಘಟಕ ನಿರ್ಮಿಸಿ, ₹16 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಿ ಎಂಇಇಪಿಎಲ್‌ನ ಯೋಜನಾ ವ್ಯವಸ್ಥಾಪಕ ವಿನೋದ್‌ಕುಮಾರ್ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.