ಯಾದಗಿರಿ: ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದುವರಮಹಾಲಕ್ಷ್ಮಿ ಪೂಜೆಗೆ ಕರಿನೆರಳು ಬಿದ್ದಿದೆ. ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಬಂದಿದೆ.ರೈತಾಪಿ ವರ್ಗ ವಿವಿಧ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಗುರುವಾರ ನಗರದ ಗಾಂಧಿ ವೃತ್ತದ ಮಾರುಕಟ್ಟೆಯಲ್ಲಿ ಜನ ಜಂಗುಳಿ ಕಂಡು ಬರಲಿಲ್ಲ.
ಪೂಜೆಗೆ ಬೇಕಾಗಿರುವ ಅಗತ್ಯ ವಸ್ತುಗಳ ಖರೀದಿಯಲ್ಲಿ ಹೆಚ್ಚಿನ ಜನಸಂಖ್ಯೆ ಕಂಡು ಬರಲಿಲ್ಲ. ಈ ಬಾರಿ ಲಾಕ್‌ಡೌನ್ ವೇಳೆ ಹೂವಿನ ವ್ಯಾಪಾರಿಗಳು ನಷ್ಟ ಉಂಟಾಗಿದ್ದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಗ್ರಾಹಕರಿಗಾಗಿಕಾದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಒಂದು ತೆಂಗಿನ ಕಾಯಿ ₹15ರಿಂದ 20 ಮಾರಾಟವಾಗುತ್ತಿತ್ತು. ಒಂದು ಮೊಳ ಹೂ ₹50ರಿಂದ 200 ರ ತನಕ ಬೆಲೆ ಇದೆ. ಹಲವಾರು ಅಂಗಡಿಗಳ ಮಾಲೀಕರು ಗ್ರಾಹಕರಿಲ್ಲದೆ ಖಾಲಿ ಕುಳಿತ್ತಿದ್ದರು. ಈ ಬಗ್ಗೆ ಹೂವಿನ ವ್ಯಾಪಾರಿ ಮಹಮದ್ ಪ್ರತಿಕ್ರಿಯಿಸಿ, ಈ ಬಾರಿ ಹಬ್ಬದ ಸಂಭ್ರಮ ಕೊರೊನಾ ಕಸಿದುಕೊಂಡಿದೆ. ಹಳ್ಳಿಗಳಿಂದ ಜನರು ಖರೀದಿಗೆ ಬಂದಿಲ್ಲ. ನಗರದ ಪ್ರದೇಶದಲ್ಲಿಯೂ ಹೆಚ್ಚಿನ ಜನಸಂಖ್ಯೆ ಬಂದಿಲ್ಲ. ಇದರಿಂದ ವ್ಯಾಪಾರವೇ ಇಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.