ADVERTISEMENT

ಹತ್ತಿ ಬೆಳೆ: ರಸ ಹೀರುವ ಕೀಟದ ಬಾಧೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 16:21 IST
Last Updated 4 ಸೆಪ್ಟೆಂಬರ್ 2020, 16:21 IST
ಶಹಾಪುರ ತಾಲ್ಲೂಕಿನ ಚಾಮನಾಳ ಗ್ರಾಮಕ್ಕೆ ಶುಕ್ರವಾರ ಕೃಷಿ ವಿಜ್ಞಾನಿ ಡಾ.ಬಿ.ಎಸ್.ರೆಡ್ಡಿ ಹತ್ತಿ ಬೆಳೆದ ಜಮೀನಿಗೆ ಭೇಟಿ ನೀಡಿ ರೈತರಿಗೆ ಸಲಹೆ ನೀಡಿದರು
ಶಹಾಪುರ ತಾಲ್ಲೂಕಿನ ಚಾಮನಾಳ ಗ್ರಾಮಕ್ಕೆ ಶುಕ್ರವಾರ ಕೃಷಿ ವಿಜ್ಞಾನಿ ಡಾ.ಬಿ.ಎಸ್.ರೆಡ್ಡಿ ಹತ್ತಿ ಬೆಳೆದ ಜಮೀನಿಗೆ ಭೇಟಿ ನೀಡಿ ರೈತರಿಗೆ ಸಲಹೆ ನೀಡಿದರು   

ಶಹಾಪುರ: ‘ಹತ್ತಿ ಬೆಳೆಗೆ ಥ್ರೀಪ್ಸ್( ನುಸಿಯ ಬಾಧೆ) ರೋಗ ಕಾಣಿಸಿಕೊಂಡಿದ್ದು, ಉಲ್ಬಣಗೊಳ್ಳುವ ಲಕ್ಷಣವಿದೆ. ಬೆಳೆಯಲ್ಲಿ ರಸ ಹೀರುವ ಕೀಟಗಳಾದ ಹಸಿರು ಜಿಗಿಹುಳು, ಹೇನು, ಬಿಳಿನೊಣ ಹುಳು ಕಂಡು ಬಂದಿದೆ’ ಎಂದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಅಧಿಕಾರಿ ಡಾ.ಬಿ.ಎಸ್.ರೆಡ್ಡಿ ತಿಳಿಸಿದ್ದಾರೆ.

ತಾಲ್ಲೂಕಿನ ಚಾಮನಾಳ ಗ್ರಾಮಕ್ಕೆ ಶುಕ್ರವಾರ ಹತ್ತಿ ಬೆಳೆದ ಪ್ರದೇಶದ ವಿವಿಧ ಜಮೀನುಗಳಿಗೆ ಭೇಟಿ ನೀಡಿ ಅವರು ಮಾಹಿತಿ ನೀಡಿದ್ದಾರೆ.

‘ರೋಗ ಕಾಣಿಸಿಕೊಂಡರೆ ಕೀಟಗಳು ಎಲೆಗಳ ಕೆಳಭಾಗದಲ್ಲಿದ್ದು, ಎಲೆಗಳ ರಸ ಹೀರುತ್ತವೆ. ಇದರಿಂದ ಎಲೆ ಮುದಡಿಕೊಳ್ಳುತ್ತವೆ ಮತ್ತು ಎಲೆಯ ಮೇಲೆ ದ್ರವ ಸ್ರವಿಸುತ್ತವೆ. ಇದರಿಂದ ಬೆಳೆ ಒಣಗುವ ಅಪಾಯವಿದೆ’ ಎಂದಿದ್ದಾರೆ.

ADVERTISEMENT

‘ಇದರ ನಿರ್ವಹಣೆಗಾಗಿ ಕೀಟಗಳ ಸಂಖ್ಯೆ ಗಮನಿಸಿ ಶೇ 5ರಷ್ಟು ಬೇವಿನ ಕಷಾಯಿ ಅಥವಾ 0.25 ಮಿ.ಲೀಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.20 ಗ್ರಾಮ ಅಸಿಟಾಮಾಪಿಡ್ 20 ಎಸ್.ಪಿ ಇದರಲ್ಲಿ ಯಾವುದಾದರು ಒಂದನ್ನು ಪ್ರತಿ ಲೀಟರ್ ನೀರಿಗೆ ಬೆರೆಯಿಸಿ ಸಿಂಡಿಸಬೇಕು’ ಎಂದು ಅವರು ಸಲಹೆ ಮಾಡಿದ್ದಾರೆ.

‘ಇದರ ಜೊತೆಗೆ ಪ್ರತಿ ಎಕರೆಗೆ 10 ರಿಂದ 15 ಹಳದಿ ಅಥವಾ ನೀಲಿ ಅಂಟು ಬಲೆಯನ್ನು ಹಾಕುವುದರಿಂದ ಹೊಳಪಾದ ಬಣ್ಣಕ್ಕೆ ಆಕರ್ಷಿಸಿ ಅಂಟಿಯಲ್ಲಿ ಸಿಕ್ಕು ಸಾಯುತ್ತವೆ. ಹೆಚ್ಚಿನ ಮಾಹಿತಿಗೆ ಡಾ. ಶಿವಾನಂದ ಹೊನ್ನಾಳಿ ದೂರವಾಣಿ ಸಂಖ್ಯೆ: 94484 37313 ಹಾಗೂ 94806 96335 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.