ADVERTISEMENT

ಯಾದಗಿರಿ | 1,045 ಮಾದರಿಗಳ ವರದಿ ಬಾಕಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 8:19 IST
Last Updated 9 ಜುಲೈ 2020, 8:19 IST

ಯಾದಗಿರಿ: ಕೊರೊನಾ ಸೋಂಕು ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿ ಬುಧವಾರ ಸೋಂಕು ದೃಢಪಟ್ಟ 11 ಮಾದರಿ ಸೇರಿದಂತೆ ಜುಲೈ 8ರವರೆಗೆ ಒಟ್ಟು 1,027 ವರದಿ ಪಾಸಿಟಿವ್ ಬಂದಿವೆ.

ಬುಧವಾರದ 275 ನೆಗೆಟಿವ್ ಸೇರಿ ಈವರೆಗೆ 26,428 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 306 ಮಾದರಿ ಸೇರಿದಂತೆ 1045 ಮಾದರಿಗಳ ವರದಿ ಬರಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್.ಜಿ.ರಜಪೂತ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಖಚಿತಪಟ್ಟ 1,027 ವ್ಯಕ್ತಿಗಳ ಪೈಕಿ ಬುಧವಾರ ಮತ್ತೆ ಒಬ್ಬರು ಗುಣಮುಖರಾಗಿದ್ದು, ಜುಲೈ 8ರವರೆಗೆ ಒಟ್ಟು 872 ಜನ ಗುಣಮುಖರಾಗಿರುತ್ತಾರೆ. ಒಬ್ಬರು ಮೃತಪಟ್ಟಿದ್ದಾರೆ. ಉಳಿದ 154 ಪ್ರಕರಣ ಸಕ್ರಿಯವಾಗಿವೆ.

ADVERTISEMENT

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 2,138 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 3,438 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 96 ಕಂಟೇನ್ಮೆಂಟ್ ಝೋನ್‌ ರಚಿಸಲಾಗಿದ್ದು, ಇದರಲ್ಲಿ 21 ಕಂಟೇನ್ ಮೆಂಟ್ ಝೋನ್‌ಗಳನ್ನು ತೆರವುಗೊಳಿಸಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.