ADVERTISEMENT

27 ಜನರಿಗೆ ಕೋವಿಡ್‌ ದೃಢ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 669ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 15:38 IST
Last Updated 10 ಜೂನ್ 2020, 15:38 IST
ಯಾದಗಿರಿಯ ಆಯುಷ್‌ ಆಸ್ಪತ್ರೆಯಲ್ಲಿ ವಲಸಿಗರಿಗೆ ಸಾಂಸ್ಥಿಕ ಕ್ವಾರಂಟೈನ್‌ ಮುದ್ರೆ ಹಾಕಲಾಯಿತು
ಯಾದಗಿರಿಯ ಆಯುಷ್‌ ಆಸ್ಪತ್ರೆಯಲ್ಲಿ ವಲಸಿಗರಿಗೆ ಸಾಂಸ್ಥಿಕ ಕ್ವಾರಂಟೈನ್‌ ಮುದ್ರೆ ಹಾಕಲಾಯಿತು   

ಯಾದಗಿರಿ: ಜಿಲ್ಲೆಯಲ್ಲಿ ಬುಧವಾರ 10 ವರ್ಷದೊಳಗಿನ 3 ಮಕ್ಕಳು ಸೇರಿ 27 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 669 ಪ್ರಕರಣಗಳ ಪೈಕಿ 119 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ಅಜಲಾಪುರದ 22 ವರ್ಷದ ಮಹಿಳೆ, ಚಾಲೇರಿ ಗ್ರಾಮದ 35 ವರ್ಷದ ಪುರುಷ, ಯಲಸತ್ತಿ ಗ್ರಾಮದ 34 ವರ್ಷದ ಮಹಿಳೆ, ಉಕ್ಕಿನಾಳ ತಾಂಡಾದ 32 ವರ್ಷದ ಪುರುಷ, ವಡವಟಿ ಗ್ರಾಮದ 10 ವರ್ಷದ ಬಾಲಕ, 35 ವರ್ಷದ ಪುರುಷ ದೊಡ್ಡಸಂಬ್ರಾದ 48 ವರ್ಷದ ಪುರುಷ, ಮಾಧ್ವಾರ ಗ್ರಾಮದ 17 ವರ್ಷದ ಯುವತಿ, ವಡವಟಿ ಗ್ರಾಮದ, ತೊಟ್ಲೂರು ಗ್ರಾಮದ 25 ವರ್ಷದ ಪುರುಷ, 22 ವರ್ಷದ ಮಹಿಳೆ, 45 ವರ್ಷದ ಪುರುಷ, ಶಹಾಪುರ ತಾಲ್ಲೂಕಿನ ಗೋಗಿಪೇಟ್ ಗ್ರಾಮದ 20 ವರ್ಷದ ಪುರುಷ, 60 ವರ್ಷದ ಮಹಿಳೆ, ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದ 19 ವರ್ಷದ ಯುವಕ, ಸುರಪುರ ತಾಲ್ಲೂಕಿನ ಕೆಂಭಾವಿಯ 20 ವರ್ಷದ ಮಹಿಳೆಗೆ ಕೋವಿಡ್‌ ಸೋಂಕು ತಗುಲಿದೆ.

27 ಜನ ಸೋಂಕಿತರಲ್ಲಿ 10 ಮಹಿಳೆಯರು, 17 ಪುರುಷರಿದ್ದಾರೆ. ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈ, ರತ್ನಗಿರಿ ಸ್ಥಳಗಳಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ.

ADVERTISEMENT

17,740 ವರದಿ ನೆಗೆಟಿವ್, 841 ವರದಿ ಬಾಕಿ:

ಜಿಲ್ಲೆಯಲ್ಲಿ ಕೋವಿಡ್‌ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿ ಬುಧವಾರ ಪಾಸಿಟಿವ್ ಬಂದ 27 ವರದಿಗಳು ಸೇರಿ ಜೂನ್ 10ರವರೆಗೆ 669 ವರದಿ ಪಾಸಿಟಿವ್ ಬಂದಿವೆ. ಬುಧವಾರದ 763 ನೆಗೆಟಿವ್ ವರದಿ ಸೇರಿ ಈವರೆಗೆ 17,740 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 194 ಮಾದರಿಗಳು ಸೇರಿದಂತೆ 841 ಮಾದರಿಗಳ ವರದಿ ಬರಬೇಕಿದೆ ಎಂದುಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಖಚಿತಪಟ್ಟ 669 ವ್ಯಕ್ತಿಗಳ ಪೈಕಿ 119 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. ಉಳಿದ 549 ಪ್ರಕರಣಗಳು ಸಕ್ರಿಯವಾಗಿರುತ್ತವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1,133 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,530 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 32 ಕಂಟೇನ್ಮೆಂಟ್ ಝೋನ್‍ಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 149 ಜನರನ್ನು ಪತ್ಯೇಕವಾಗಿ ಇರಿಸಲಾಗಿದೆ. ಶಹಾಪುರ ಕೋವಿಡ್‌ ಕೇರ್ ಸೆಂಟರ್‌ನಲ್ಲಿ 96 ಜನರನ್ನು, ಸುರಪುರ ಕೋವಿಡ್‌ ಕೇರ್ ಸೆಂಟರ್‌ನಲ್ಲಿ86 ಮತ್ತು ಏಕಲವ್ಯ ಕೋವಿಡ್‌ ಕೇರ್ ಸೆಂಟರ್‌ನಲ್ಲಿ 179 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 34 ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಒಟ್ಟು 1,423 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.